ಬೆಂಗಳೂರು,ಸೆಪ್ಟಂಬರ್,12,2026 (www.justkannada.in): ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ಇಡಿ ದಾಳಿ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಹುನ್ನಾರ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈಗ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಸತೀಶ್ ಜಾರಕಿಹೊಳಿ ಕೂಡ ಕಾಂಗ್ರೆಸ್ ಪಕ್ಷದವರೇ ಅಲ್ವಾ? ನಾನು ಬ್ಯೂಸಿನೆಸ್ ಮಾಡುವವನು ಅಂತಾ ಅವರೇ ಹೇಳಿದ್ದು. ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಮೇಲೆ ಯಾರು ಆರೋಪ ಮಾಢುವುದು ಸರಿಯಲ್ಲ. ಭ್ರಷ್ಟಾಚಾರ ಮಾಡಿದಾಗ ಜಾತಿ ಹೇಳಿದ ಕೂಡಲೇ ಬಿಡಬೇಕಾ? ಎಂದು ಪ್ರಶ್ನಿಸಿದರು.
ದಾಖಲೆ ಕೊಟ್ಟು ರಾಜೀನಾಮೆ ಪಡೆಯಲಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಹೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ದಾಖಲೆ ಯಾವಾಗ ಯಾರಿಗೆ ಕೊಡಬೇಕೋ ಕೊಡುತ್ತಾರೆ ಎಂದರು.







