Monday, October 12, 2026

Dasara Wishes

ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾ...
Happy Dasara
Home Front Page ಮೈಸೂರು ಪ್ರವಾಸ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಸುತ್ತೂರು ಮಠ ಭೇಟಿ ರದ್ದು…

ಮೈಸೂರು ಪ್ರವಾಸ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಸುತ್ತೂರು ಮಠ ಭೇಟಿ ರದ್ದು…

ಮೈಸೂರು,ನ,7,2019(www.justkannada.in): ಮಾಜಿ ಸಚಿವ, ಕಾಂಗ್ರೆಸ್  ನಾಯಕ ಡಿ.ಕೆ.ಶಿವಕುಮಾರ್ ಅವರು ಇಂದಿನಿಂದ ಎರಡು ದಿನ ಮೈಸೂರು ಪ್ರವಾಸ ಕೈಗೊಂಡಿದ್ದು ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

 ಬೆಂಗಳೂರಿನಿಂದ ಮೈಸೂರಿಗೆ  ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು  ಸಜ್ಜಾಗಿದ್ದಾರೆ.  ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ಈ ನಡುವೆ ನಂಜನಗೂಡು ಭೇಟಿ ನಂತರ ಸಂಜೆ 4 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ  ನಿಗದಿಯಾಗಿತ್ತು. ಆದರೆ ಸುತ್ತೂರು ಶ್ರೀಗಳು ಇಲ್ಲದೆ ಇರುವುದರಿಂದ ಡಿ.ಕೆ ಶಿವಕುಮಾರ್ ಅವರ ಭೇಟಿ ರದ್ಧಾಗಿದೆ.  ನಂಜನಗೂಡಿಗೆ ಭೇಟಿ ನೀಡಿದ ನಂತರ ಡಿ.ಕೆ ಶಿವಕುಮಾರ್ ಗಣಪತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಹ ಸಲ್ಲಿಸಲಿದ್ದಾರೆ.

Key words: Mysore-Former minister -DK Sivakumar-suttur-visit- cancel