ಬೆಳ್ಳಂಬೆಳಗ್ಗೆ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು…

0
274

ಮೈಸೂರು,ನ,7,2019(www.justkannada.in): ಮೈಸೂರು ತಾಲೂಕಿನ ಸೋಮೇಶ್ವರಪುರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿದ್ದ ಚಿರತೆ ಇಂದು ಬೆಳ್ಳಂಬೆಳಗ್ಗೆ ಬೋನಿನಲ್ಲಿ ಸೆರೆಯಾಗಿದೆ.

ಕಳೆದ 15 ದಿನಗಳಿಂದ ಚಿರತೆ ಪ್ರತ್ಯೆಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿತ್ತು. ಸೋಮೇಶ್ವರಪುರದ ನಿವಾಸಿ ಹೊಟ್ಟೆ ಬಸಪ್ಪರವರ ಜಮೀನಿನಲ್ಲಿ ಚಿರತೆ  ಕಾಣಿಸಿಕೊಂಡಿತ್ತು. ಹೀಗಾಗಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಈ ಹಿನ್ನೆಲ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಜಮೀನಿನಲ್ಲಿ ಬೋನು ಇಟ್ಟಿದ್ದರು. ಇದೀಗ ಇಂದು ಬೆಳಗ್ಗೆ 6:30ಕ್ಕೆ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Key words: mysore-  leopard -fell – Bone-villagers