Friday, September 11, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸದಲ್ಲಿ ಸಚಿವ ಎಂ.ಬಿ ಪಾಟೀಲ್ : ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸದಲ್ಲಿ ಸಚಿವ ಎಂ.ಬಿ ಪಾಟೀಲ್ : ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಸೆಳೆಯುವ ಉದ್ದೇಶದಿಂದ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಸ್ಯಾಫ್ರಾನ್, ಎಲ್ ಎಫ್ ಬಿ, ನೆಕ್ಸ್ಪೀರಿಯಾ, ರಾಯಲ್ ಡಿ ಹ್ಯೂಸ್, ಎಸ್ಸಿಲಾರ್-ಲಕ್ಸೋಟಿಕ ಮುಂತಾದ‌ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜತೆಗೆ ಈ ಎಲ್ಲಾ ಕಂಪನಿಗಳನ್ನು ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಎಂ.ಬಿ ಪಾಟೀಲ್  ಅವರು, ಏರೋಸ್ಪೇಸ್ ಕಂಪನಿಯಾಗಿರುವ ಸಾಫ್ರಾನ್ ಗೆ ರಾಜ್ಯದಲ್ಲಿ ಏವಿಯಾನಿಕ್ಸ್, ಬಾಹ್ಯಾಕಾಶ ವಿದ್ಯುನ್ಮಾನ ಮತ್ತಿತರ ಅಡ್ವಾನ್ಸ್ಡ್ ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ಬಂಡವಾಳ ಹೂಡಿಕೆಯನ್ನು ಪರಿಗಣಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳು, 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯಂತೆ ಬೆಂಗಳೂರಿನಲ್ಲಿ 12 ಸಾವಿರ ಚದರ ಮೀಟರ್ ವಿಸ್ತಾರದ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕ ಮತ್ತು ಕಲ್ಯಾಣಿ ಟೆಕ್ ಪಾರ್ಕ್ ನಲ್ಲಿ 3,000 ಚ.ಮೀ. ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ಮಾಣ ಮುಕ್ತಾಯದ ಹಂತಕ್ಕೆ ಬಂದಿರುವುದಾಗಿ ತಿಳಿಸಿದರು.

ಎಸ್ಸಿಲಾರ್-ಲಕ್ಸೋಟಿಕ ಕಂಪನಿಯು ಕನ್ನಡಕ ಮತ್ತು ಮೆಡ್-ಟೆಕ್ ವಲಯಗಳಲ್ಲಿ ಹೆಸರು ಮಾಡಿದೆ. ರಾಜ್ಯದಲ್ಲಿ ಅಡ್ವಾನ್ಸಡ್ ಲೆನ್ಸ್ ತಯಾರಿಕೆಯನ್ನು ಪರಿಗಣಿಸುವಂತೆ ಕಂಪನಿಗೆ ಕೋರಲಾಗಿದೆ. ಇದೇ ರೀತಿಯಲ್ಲಿ ಡಚ್ ಹೈನುಗಾರಿಕೆ ಕಂಪನಿಯಾದ ಡೇ ಹ್ಯೂಸ್ ರಾಜ್ಯದ ಹಾಲು ಮಹಾಮಂಡಳಿ ಜತೆ ಸಹಭಾಗಿತ್ವ ಹೊಂದಲು ಒಲವು ವ್ಯಕ್ತಪಡಿಸಿದೆ ಎಂದು ಅವರು ವಿವರಿಸಿದ್ದಾರೆ.Minister mb patil mb patil 2

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ನೆಕ್ಸ್ ಪೀರಿಯಾ ಕಂಪನಿಗೆ ರಾಜ್ಯದಲ್ಲಿ ಎಟಿಎಂಪಿ (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕಿಂಗ್) ಸ್ಥಾವರ ಸ್ಥಾಪನೆಗೆ ಮುಂದಾಗುವಂತೆ ಪ್ರಸ್ತಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ನೆಕ್ಸ್ ಪೀರಿಯಾ ಕಂಪನಿಯ ಹಿರಿಯ ನಿರ್ದೇಶಕ ಹೇನ್ಸ್ ವ್ಯಾನ್ ರೆಮ್ಡೋಂಕ್, ಡೇ ಹ್ಯೂಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಟ್ಜರ್ ಔಡ್ಜೆನಸ್, ಎಸ್ಸಿಲಾರ್-ಲಕ್ಸೋಟಿಕ ಕಂಪನಿಯ ಸಿಇಒ ಪಾಲ್ ಡು ಸೈಲಾಂಟ್, ವೇಣು ಅಂಬಟಿ, ಸಾಫ್ರಾನ್ ಕಂಪನಿಯ ಸಿಇಒ ಫ್ರಾಂಕ್ ಸೌದೊ, ಅಲೆಕ್ಸಾಂಡರ್ ಡೆರ್ವಾಕ್ಸ್ ಮುಂತಾದವರು ಭಾಗವಹಿಸಿದ್ದರು.Minister jk02_new jk02 new

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

 

English Summary
Title

Karnataka Minister M.B. Patil Visits Netherlands to Boost Semiconductor & Aerospace Investments

Short Description
Karnataka Industries Minister M.B. Patil led a high-level official delegation to France and the Netherlands from September 7 to September 11, 2026, to boost global investments. The mission focused on attracting key partnerships in semiconductors, aerospace, manufacturing, and R&D. In the Netherlands, Minister Patil held strategic talks with tech giant Nexperia to expand Karnataka's semiconductor ATMP ecosystem and explored dairy collaborations with Royal De Heus. This successful European tour actively promoted the state's robust industrial policy, positioning Karnataka as India's premier tech hub ahead of the upcoming Global Investors Meet (GIM).
Keywords
Minister, M.B. Patil, Netherlands, Visit