Friday, September 11, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ನಿವೇಶನ ರಹಿತರಿಗೆ ಸೈಟ್, ಉದ್ಯೋಗಸೃಷ್ಠಿ, ರೈತರಿಗೆ ನೇಗಿಲಯೋಗಿ ಯೋಜನೆ- ಸಿಎಂ ಡಿಕೆಶಿ ಘೋಷಣೆ

ನಿವೇಶನ ರಹಿತರಿಗೆ ಸೈಟ್, ಉದ್ಯೋಗಸೃಷ್ಠಿ, ರೈತರಿಗೆ ನೇಗಿಲಯೋಗಿ ಯೋಜನೆ- ಸಿಎಂ ಡಿಕೆಶಿ ಘೋಷಣೆ

ಬೆಂಗಳೂರು,ಸೆಪ್ಟಂಬರ್,10,2026 (www.justkannada.in): ನಿವೇಶನ ರಹಿತ ಕುಟುಂಬಗಳಿಗೆ ಗೆ ಸೈಟ್ ನೀಡಲು ನಿರ್ಧರಿಸಿದ್ದೇವೆ. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಠಿಗೆ ಉದ್ಯೋಗ ನಿಧಿ ಯೋಜನೆ ಮತ್ತು ರೈತರಿಗಾಗಿ ನೇಗಿಲಯೋಗಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ತಮ್ಮ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಿವೇಶನ ರಹಿತ ಕುಟುಂಬಗಳಿಗೆ ಗೆ ಸೈಟ್ ನೀಡಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ 5 ಲಕ್ಷ ಸೈಟ್ ಗಳನ್ನ ನೀಡಲು ಸಹಿ ಹಾಕಿದ್ದೇವೆ.  50 ಸಾವಿರ ಉದ್ಯೋಗ ಸೃಷ್ಠಿಸಲು ಸರ್ಕಾರ ನಿರ್ಧರಿಸಿದೆ. ರೈತರಿಗಾಗಿ ನೇಗಿಲ ಯೋಜನೆ ಜಾರಿಗೆ ತೀರ್ಮಾನಿಸಿದ್ದೇವೆ. ಹಿಂದುಳಿದ ಜಿಲ್ಲೆಗಳಲ್ಲಿ  ಉದ್ಯೋಗ ಸೃಷ್ಠಿಗೆ ಉದ್ಯೋಗ ನಿಧಿ ಯೋಜನೆ ಭಾರತ್ ಜೋಡೋ ಯುವಸಂಘ  ಇದಕ್ಕಾಗಿ 10 ಲಕ್ಷ ಹಣ ಮೀಸಲಿಗೆ ನಿರ್ಧಾರ ಮಾಡಲಾಗಿದೆ ಎಂದರು.

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ರಷ್ಟು ಮೀಸಲಾತಿ.  ಪಬ್ಲಿಕ್ ಶಾಲೆಗಳನ್ನ ಉತ್ತಮ ಶಿಕ್ಷಣ ಕೇಂದ್ರಗಳಾಗಿ ಮಾಡಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕು.  ಕೇಂದ್ರ ಒಪ್ಪಿಗೆ ಕೊಟ್ಟ ಒಂದೇ ತಿಂಗಳಲ್ಲಿ ಭೂಮಿ ಪೂಜೆ ನಡೆಯಲಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಉಪಯೋಗಿಸಿಕೊಂಡು ಉಳಿದ ನೀರು ತಮಿಳುನಾಡಿಗೆ ಹೋಗುತ್ತೆ ಎಂದು ತಿಳಿಸಿದರು.

Key words: CM, DK Shivakumar, announces, schemes, Congress, 100Days Celebration