ಮೈಸೂರು,ಸೆಪ್ಟಂಬರ್,11,2026 (www.justkannada.in): ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಮೃತಳ ಮಗಳು ಗೀತಾ ಅವರಿಗೆ ₹4,12,500 ಪರಿಹಾರದ ಚೆಕ್ ವಿತರಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು ಅವರು ಗೀತಾ ಅವರಿಗೆ ಚೆಕ್ ಹಸ್ತಾಂತರಿಸಿದರು.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತ ಮಹದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಗೀತಾ ಅವರಿಗೆ ₹20 ಸಾವಿರ ನೀಡಿ ರಾಜಿ ಮಾಡಿಸಲು ಮಧ್ಯವರ್ತಿಗಳು ಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದ ಬಳಿಕ, ಹುಲ್ಲಹಳ್ಳಿ ಠಾಣೆಯಲ್ಲಿ ಆರೋಪಿ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಯಮಾನುಸಾರ ಒಟ್ಟು ₹8 ಲಕ್ಷ ಪರಿಹಾರ ನೀಡಬೇಕಿದ್ದು, ಈಗ ₹4.12 ಲಕ್ಷ ವಿತರಿಸಲಾಗಿದೆ. ಉಳಿದ ಮೊತ್ತವನ್ನು ಕೆಲ ದಿನಗಳಲ್ಲಿ ನೀಡುವುದಾಗಿ ಇಲಾಖೆ ಭರವಸೆ ನೀಡಿದೆ.











