Monday, September 7, 2026

BDA Apartments

Home Front Page ಡಿಕೆಶಿ ಜಾಸ್ತಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ ‘ಕೈ’ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದಿದೆ- ಸಿ.ಟಿ ರವಿ

ಡಿಕೆಶಿ ಜಾಸ್ತಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ ‘ಕೈ’ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದಿದೆ- ಸಿ.ಟಿ ರವಿ

ಕೊಪ್ಪಳ,ಸೆಪ್ಟಂಬರ್,7,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ಜಾಸ್ತಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಲೇವಡಿ ಮಾಡಿದರು.

ಇಂದು ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಸಿದ್ದರಾಮಯ್ಯ ಚುನಾವಣಾ ರಾಜಕೀಯಕ್ಕೆ ಬರಬೇಕೆಂಬ ಒತ್ತಾಯ ವಿಚಾರ.  ಇದನ್ನು ಕಾಲಕ್ಕೆ ಬಿಡೋಣ.  ಚುನಾವಣೆ ಯಲ್ಲಿ ಸ್ಪರ್ಧೆ ಮಾಡಲ್ಲ ಎಂದವರೂ ಸ್ಪರ್ಧೆ ಮಾಡಿದ್ದಾರೆ. ಹೈಕಮಾಂಡ್  ಗೆ ಜಾಸ್ತಿ ಸೂಟ್ ಕೇಸ್ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ.  ಅದಕ್ಕೆ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದಿದೆ.

ಡಿಕೆ ಶಿವಕುಮಾರ್ ರಷ್ಟು ಸೂಟ್ ಕೇಸ್  ಕೊಡಲು ಸಿದ್ದರಾಮಯ್ಯಗೆ ಆಗಲಿಲ್ಲ. ಡಿಕೆಶಿಯಷ್ಟು ದೊಡ್ಡ ಸೂಟ್ ಕೇಸ್ ಕೊಡಲು ಯಾರಿಗೂ ಸಾಧ್ಯವಿಲ್ಲ. .ಹೈಕಮಾಂಡ್ ಗೆ ಸೂಟ್ ಕೇಸ್ ಬೇಕಿತ್ತು.  ಡಿಕೆ ಶಿವಕುಮಾರ್ ಗೆ ಅಧಿಕಾರ ಬೇಕಿತ್ತು ಎಂದು ಸಿಟಿ ರವಿ ಹೇಳಿದರು.

Key words: high command, Siddaramaiah, DK Shivakumar, suitcases, CT Ravi