Sunday, September 6, 2026

BDA Apartments

Home Front Page KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .

KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .

Bengaluru: Karnataka Governor Thawar Chand Gehlot has directed the Higher Education Department to take appropriate action over allegations of financial irregularities involving the Vice-Chairman of the Karnataka State Higher Education Council (KSHEC). The allegations reportedly involve reimbursement of expenses from KSHEC funds, including bills linked to refreshments and other purchases. Documents obtained through RTI have reportedly been submitted in support of the complaint.

 

ಬೆಂಗಳೂರು, SEP.06,2026: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ—KSHECನ ಉಪಾಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರ್ಥಿಕ ಅಕ್ರಮ ಹಾಗೂ ಸಾರ್ವಜನಿಕ ಹಣದ ದುರ್ಬಳಕೆ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಮಂಡಳಿಯ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅವರ ವಿರುದ್ಧ ಬಂದಿರುವ ದೂರಿನ ಹಿನ್ನೆಲೆಯಲ್ಲಿ, ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಪತ್ರ ಬರೆದು ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ದೂರಿನ ಪ್ರಮುಖ ಆರೋಪವೇನೆಂದರೆ, KSHECನ ಹಣವನ್ನು ವೈಯಕ್ತಿಕ ಖರ್ಚು ಮತ್ತು ಖಾಸಗಿ ಮನರಂಜನೆಗೆ ಸಂಬಂಧಿಸಿದ ವೆಚ್ಚಗಳ ಮರುಪಾವತಿಗೆ ಬಳಸಲಾಗಿದೆ ಎಂಬುದು. ದೂರುದಾರರು ಮಾಹಿತಿ ಹಕ್ಕು ಕಾಯ್ದೆ—RTI ಮೂಲಕ ಪಡೆದುಕೊಂಡಿರುವ ಕೆಲವು ಬಿಲ್‌ಗಳ ಪ್ರತಿಗಳನ್ನು ಲೋಕಭವನಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ದಾಖಲೆಗಳಲ್ಲಿ ಬೆಂಗಳೂರಿನ ಕ್ಲಬ್ ಸೇರಿದಂತೆ ವಿವಿಧ ಕಡೆಗಳ ಬಿಲ್‌ಗಳನ್ನು ಮಂಡಳಿ ನಿಧಿಯಿಂದ ಮರುಪಾವತಿ ಮಾಡಲಾಗಿದೆ ಎಂಬ ಆರೋಪವಿದೆ.

ಇನ್ನು 2024ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಮರುಪಾವತಿಯಾದ ಕೆಲವು ರಿಫ್ರೆಶ್‌ಮೆಂಟ್ ಬಿಲ್‌ಗಳ ಒಟ್ಟು ಮೊತ್ತ ₹34,350 ಎಂದು ವರದಿಯಾಗಿದೆ. ಈ ದಾಖಲೆಗಳಲ್ಲಿ ಸೂಪರ್‌ಮಾರ್ಕೆಟ್‌ನ ಬಿಲ್ ಕೂಡ ಸೇರಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸಾರ್ವಜನಿಕ ಹಣದ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

ರಾಜ್ಯಪಾಲರ ಪತ್ರದಲ್ಲಿ, KSHEC ಎನ್ನುವುದು ಸರ್ಕಾರ, ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಹಾಗೂ ಪರಿಣಿತರನ್ನು ಒಳಗೊಂಡ ಮಹತ್ವದ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಹಣಕಾಸು ಅಕ್ರಮದ ಆರೋಪಗಳು ಕೇಳಿಬಂದರೆ ಅದು ಶಿಕ್ಷಣ ಸಂಸ್ಥೆಗಳ ಮೇಲಿನ ನಂಬಿಕೆಗೆ ಧಕ್ಕೆ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಹೀಗಾಗಿ ಈ ಪ್ರಕರಣದಲ್ಲಿ ಕೇವಲ ಬಿಲ್‌ಗಳ ವಿಚಾರವಲ್ಲ, ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನದ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ರಾಜ್ಯಪಾಲರ ಸೂಚನೆಯ ಬಳಿಕ ಉನ್ನತ ಶಿಕ್ಷಣ ಇಲಾಖೆ ಈ ಆರೋಪಗಳನ್ನು ಹೇಗೆ ಪರಿಶೀಲಿಸಲಿದೆ?

ದೂರುದಲ್ಲಿರುವ ಬಿಲ್‌ಗಳು ನಿಜವಾಗಿಯೂ ವೈಯಕ್ತಿಕ ವೆಚ್ಚಗಳಿಗೆ ಸಂಬಂಧಿಸಿದ್ದೇ?

ಅಥವಾ ಅವು ಅಧಿಕೃತ ಮಂಡಳಿ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳೇ? ಎಂಬುದಕ್ಕೆ ಮುಂದಿನ ತನಿಖೆ ಹಾಗೂ ದಾಖಲೆಗಳ ಪರಿಶೀಲನೆಯಿಂದ ಸ್ಪಷ್ಟತೆ ಸಿಗಬೇಕಿದೆ.

ಒಟ್ಟಿನಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದ ಪ್ರಮುಖ ಸಂಸ್ಥೆಯಾದ KSHECನಲ್ಲಿ ಹಣಕಾಸು ನಿರ್ವಹಣೆ ಕುರಿತ ಆರೋಪಗಳು ರಾಜ್ಯಪಾಲರ ಮಟ್ಟಕ್ಕೆ ತಲುಪಿರುವುದು ಇದೀಗ ರಾಜ್ಯದ ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Courtesy: The Hindu

Key words: Karnataka, KSHEC, Governor, HigherEducation , FinancialIrregularities , Bengaluru

SUMMARY:

Karnataka Governor Seeks Action Against KSHEC Vice-Chairman

Bengaluru: Karnataka Governor Thawar Chand Gehlot has directed the Higher Education Department to take appropriate action over allegations of financial irregularities involving the Vice-Chairman of the Karnataka State Higher Education Council (KSHEC).

The allegations reportedly involve reimbursement of expenses from KSHEC funds, including bills linked to refreshments and other purchases. Documents obtained through RTI have reportedly been submitted in support of the complaint.

The Governor has asked the Higher Education Minister to personally examine the matter and initiate necessary action. The allegations are yet to be established, and further scrutiny is expected.

 

#Karnataka #KSHEC #Governor #HigherEducation #FinancialIrregularities #Bengaluru