Sunday, September 6, 2026

BDA Apartments

Home Front Page MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ

MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ

Chamundeshwari MLA G.T. Devegowda has sparked a political debate by asserting that “people value GT Devegowda more than the JDS in Chamundeshwari.” He alleged that he was insulted and sidelined by the JDS for the past three years, despite being a party MLA, and was not invited to several party programmes and conventions

 

ಮೈಸೂರು, SEP.06,2026: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಜಿ.ಟಿ. ದೇವೇಗೌಡರೇ ಮುಖ್ಯ ಎಂಬ ಸಂದೇಶವನ್ನು ಕ್ಷೇತ್ರದ ಜನ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನಲ್ಲೇ ತಮಗೆ ಅವಮಾನವಾಗಿದೆ ಎಂದು ನೇರ ಅಸಮಾಧಾನ ಹೊರಹಾಕಿದರು. ತಾವು ಜೆಡಿಎಸ್ ಶಾಸಕರಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮ, ಸಮಾವೇಶಗಳಿಗೆ ತಮ್ಮನ್ನು ಆಹ್ವಾನಿಸದೆ ದೂರ ಇಡಲಾಯಿತು ಎಂದು ಆರೋಪಿಸಿದರು. ತಮಗಾದ ಅವಮಾನಕ್ಕೆ ಉತ್ತರ ನೀಡಲು ಕ್ಷೇತ್ರದ ಜನರು ಮೆರವಣಿಗೆ ನಡೆಸುತ್ತಿದ್ದಾರೆ. ಇದು ತಮ್ಮ ಶಕ್ತಿ ಪ್ರದರ್ಶನವಲ್ಲ, ಜನರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲದ ಸಂಕೇತ ಎಂದು ಜಿಟಿಡಿ ಭಾವುಕರಾಗಿ ಹೇಳಿದರು.

ಇದರ ನಡುವೆ, “ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ. ದೇವೇಗೌಡ ಮುಖ್ಯ” ಎಂಬ ಅವರ ಹೇಳಿಕೆ ಜೆಡಿಎಸ್‌ ವರಿಷ್ಠರ ವಿರುದ್ಧದ ನೇರ ರಾಜಕೀಯ ಸಂದೇಶದಂತಿದೆ. “ಪಕ್ಷ ಯಾವುದೇ ಇರಲಿ, ಇಲ್ಲಿನ ಜನರಿಗೆ ಜಿ.ಟಿ. ದೇವೇಗೌಡ ಮುಖ್ಯ. ಕ್ಷೇತ್ರದ ಜನ ನನ್ನನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಸಾಯುವ ತನಕ ಏಕಾಂಗಿಯಾಗಿಯೇ ಈ ಜನರ ಸೇವೆ ಮಾಡುತ್ತೇನೆ” ಎಂದು ಜಿಟಿಡಿ ಘೋಷಿಸಿದರು.

ತಮ್ಮ ಹಳೆಯ ರಾಜಕೀಯ ನಡೆಗೂ ಉದಾಹರಣೆ ನೀಡಿದ ಅವರು, ಬಿಜೆಪಿಗೆ ತೆರಳಿದ್ದ ಸಂದರ್ಭದಲ್ಲೂ ಚಾಮುಂಡೇಶ್ವರಿ ಜನ ತಮ್ಮ ಕೈಬಿಡಲಿಲ್ಲ ಎಂದರು. ಆಗ ಜೆಡಿಎಸ್ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಬಂದಿತ್ತು ಎಂದು ನೆನಪಿಸಿದರು. ಅಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಜನರನ್ನೇ ಕರೆದು ಅವರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಹೆಸರು ಹೇಳದೇ ತಿರುಗೇಟು ನೀಡಿದ ಜಿಟಿಡಿ, ಚಾಮುಂಡೇಶ್ವರಿಯಲ್ಲಿ ಅಭ್ಯರ್ಥಿಯ ಮುಖಕ್ಕಿಂತ ತಮ್ಮ ಮೇಲಿನ ಜನರ ನಂಬಿಕೆಯೇ ಮುಖ್ಯ ಎಂಬ ಸಂದೇಶ ಸಾರಿದರು.

“ನನ್ನ ವಿರುದ್ಧ ಎಂಥವರೇ ನಿಂತರೂ ಜನ ನನ್ನ ಕೈಬಿಡಲಿಲ್ಲ. ಮುಖ್ಯಮಂತ್ರಿಯ ವಿರುದ್ಧವೇ 35 ಸಾವಿರ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ” ಎಂದು ತಮ್ಮ ಜನಬೆಂಬಲವನ್ನು ಉಲ್ಲೇಖಿಸಿದರು.

ಒಟ್ಟಿನಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‘ಪಕ್ಷ ಮುಖ್ಯವೋ, ನಾಯಕ ಮುಖ್ಯವೋ?’ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಜಿಟಿಡಿಯ ಹೇಳಿಕೆ ಜೆಡಿಎಸ್‌ ಒಳಗಿನ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದು, ಮುಂದಿನ ಚುನಾವಣೆಗೆ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಸಮೀಕರಣಗಳು ಬದಲಾಗುವ ಮುನ್ಸೂಚನೆಯನ್ನೂ ನೀಡಿದೆ.

ಚಾಮುಂಡೇಶ್ವರಿಯಲ್ಲಿ ಜಿಟಿಡಿ ವರ್ಸಸ್ ಜೆಡಿಎಸ್?

ಈ ಮಾತಿನ ಸಮರ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದೇ ಈಗ ಮೈಸೂರು ರಾಜಕಾರಣದ ಕುತೂಹಲ.

Key words: GTDevegowda ,Chamundeshwari , Kumaraswamy, Mysuru ,KarnatakaPolitics ,PoliticalRow,JDS

ENGLISH SUMMARY:

Mysuru | GTD Takes a Dig at JDS

Chamundeshwari MLA G.T. Devegowda has sparked a political debate by asserting that “people value GT Devegowda more than the JDS in Chamundeshwari.” He alleged that he was insulted and sidelined by the JDS for the past three years, despite being a party MLA, and was not invited to several party programmes and conventions.

Calling the public rally a symbol of people’s love rather than a show of strength, GTD said, “Whatever the party, GT Devegowda is important to the people of Chamundeshwari.” He also indirectly countered H.D. Kumaraswamy, recalling that even when he had joined the BJP, voters continued to support him while the JDS slipped to third place in the constituency.

His remarks have intensified the GTD–JDS political tussle in Chamundeshwari, raising questions over his next political move ahead of the elections.

#GTDevegowda #Chamundeshwari #JDS #HDKumaraswamy #Mysuru #KarnatakaPolitics #PoliticalRow