Thursday, September 3, 2026

BDA Apartments

Home Front Page ಪಟಾಕಿ ನಿಷೇಧ ಸಡಿಲಿಕೆ ಅರ್ಜಿ : ಆತುರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್

ಪಟಾಕಿ ನಿಷೇಧ ಸಡಿಲಿಕೆ ಅರ್ಜಿ : ಆತುರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್

ನವದೆಹಲಿ ,ಸೆಪ್ಟಂಬರ್,3,2026 (www.justkannada.in): ಪಟಾಕಿಗಳ ಮೇಲಿನ ನಿಷೇಧ ಸಡಿಲಿಕೆ ಕುರಿತು ಅರ್ಜಿ ಸಂಬಂಧ ನಾವು ನಾವು ಆತುರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಪಟಾಕಿಗಳ ಮೇಲಿನ ನಿಷೇಧ ಸಡಿಲಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್ ನಾವು ಆತುರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.ಸೂಕ್ಷ್ಮ ವಿಚಾರದಲ್ಲಿ ಆತುರದ ನಿರ್ಧಾರ ಬೇಡ.  ವಿಚಾರಣೆಯನ್ನು ಸಾವಕಾಶವಾಗಿ ಹಾಗೂ ಎಚ್ಚರಿಕೆಯಿಂದ ನಡೆಸಬೇಕಿದೆ ಎಂದು ತಿಳಿಸಿದೆ.

ದೆಹಲಿಯಲ್ಲಿ ಕೆಲವು ಆದೇಶಗಳು ವ್ಯತೀರಿಕ್ತ ಪರಿಣಾಮ ಬೀರಿವೆ. ಕೆಲವು ಆದೇಶ ವ್ಯತಿರಿಕ್ತ ಪರಿಣಾಮ ಬೀರಿದ್ದನ್ನು ಈ ಹಿಂದೆ ನೋಡಿದ್ದೇವೆ. ಪರಿಸರ ಸಮಸ್ಯೆಗಳ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದು ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿಯ ಕೆಲಸವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಇತರa ಹಿತಾಸಕ್ತಿಗಳ ನಡುವೆ, ಸಮತೋಲನ ಸಾಧಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

Key words: Petition, firecracker, Supreme Court,