Sunday, October 18, 2026

Dasara Wishes

Happy Dasara
Home Cinema ನಟ ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: 2 ಕೋಟಿ ರೂ. ಜೀವನಾಂಶ  ನೀಡಲು ಹೈಕೋರ್ಟ್ ಆದೇಶ

ನಟ ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: 2 ಕೋಟಿ ರೂ. ಜೀವನಾಂಶ  ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು,ಸೆಪ್ಟಂಬರ್,3,2026 (www.justkannada.in): ಸ್ಯಾಂಡಲ್‌ವುಡ್‌ನ ಖ್ಯಾತ ನಟ ‘ದುನಿಯಾ’ ವಿಜಯ್   ಮತ್ತು ಪತ್ನಿ ನಾಗರತ್ನ  ಅವರ ದಾಂಪತ್ಯ ಜೀವನ ಅಂತ್ಯಗೊಂಡಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ  ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ.

ವಿಚ್ಛೇದನ ಮಂಜೂರು ಮಾಡುವ ಜೊತೆಗೆ, ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂಪಾಯಿಗಳ ಜೀವನಾಂಶ ಪಾವತಿಸುವಂತೆ ನಟ ದುನಿಯಾ ವಿಜಯ್ ಅವರಿಗೆ ಹೈಕೋರ್ಟ್  ನ್ಯಾಯಪೀಠವು ಆದೇಶಿಸಿದೆ.ನಟ ದುನಿಯಾ ವಿಜಯ್ high court

ವಿಚಾರಣೆ ವೇಳೆ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯ ಮತ್ತು ಅವರ ಜೀವನ ನಿರ್ವಹಣೆಯ ಪ್ರಮುಖ ಅಂಶವನ್ನು ಹೈಕೋರ್ಟ್ ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿದೆ. ನಟ ದುನಿಯಾ ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಪರ ಗಳಿಕೆ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಪರಾಮರ್ಶಿಸಿ 2 ಕೋಟಿ ರೂ.  ಜೀವನಾಂಶದ ಮೊತ್ತ ನೀಡಲು ನಿರ್ದೇಶಿಸಿದೆ.ನಟ ದುನಿಯಾ ವಿಜಯ್ jk02_new jk02 new

Key words: Actor Duniya Vijay, Nagarathna, Divorce ,High Court.