Saturday, August 29, 2026

BDA Apartments

Home Front Page ಬಿಜೆಪಿ ಕಚೇರಿ ತನಿಖಾ ಸಂಸ್ಥೆಯಲ್ಲ: ನಾಗೇಂದ್ರ ಎಲ್ಲಾ ಹೋರಾಟಕ್ಕೂ ಸಿದ್ದ- ಬಿ.ಕೆ ಹರಿಪ್ರಸಾದ್

ಬಿಜೆಪಿ ಕಚೇರಿ ತನಿಖಾ ಸಂಸ್ಥೆಯಲ್ಲ: ನಾಗೇಂದ್ರ ಎಲ್ಲಾ ಹೋರಾಟಕ್ಕೂ ಸಿದ್ದ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಆಗಸ್ಟ್,29,2026 (www.justkannada.in):  ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿರುವ ವಿಚಾರ ಸಂಬಂಧ ಪ್ರತಿಭಟನೆ ನಡೆಸಿದ್ದ ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್  ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್,  ಬಿಜೆಪಿಯವರು ದೊಡ್ಡ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ. ರಾಜೀನಾಮೆ ನೀಡಿದ ಕಾರಣಕ್ಕೆ ಆರೋಪ ಸಾಬೀತು ಎಂಬರ್ಥವಲ್ಲ.  ಆರೋಪ ಹೌದೋ..? ಅಲ್ಲವೋ  ಅಂತಾ ಕೋರ್ಟ್ ತೀರ್ಮಾನಿಸುತ್ತೆ. ಬಿಜೆಪಿ ಕಚೇರಿ ನ್ಯಾಯಾಲಯವೂ ಅಲ್ಲ ತನಿಖಾ ಸಂಸ್ಥೆಯೂ ಅಲ್ಲ ಎಂದರು.

ಒಂದು ವಿಕೆಟ್ ಪತನ ಅನ್ನೋಕೆ ಇದೇನು ಐಪಿಎಲ್ ಮ್ಯಾಚ್ ಅಲ್ಲ.  ಬಿ. ನಾಗೇಂದ್ರ ಅವರು ಎಲ್ಲಾ ರೀತಿಯ ತನಿಖೆಗೂ,  ಹೋರಾಟಕ್ಕೂ ಸಿದ್ದವಿದ್ದಾರೆ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.

Key words: BJP , Nagendra, ready, any fight, B.K. Hariprasad