Sunday, October 18, 2026

Dasara Wishes

Happy Dasara
Home Front Page 87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಮಂಡ್ಯ,ಆಗಸ್ಟ್,29,2026 (www.justkannada.in): ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ ರಾಜೀನಾಮೆ ಎಂದಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಗೆ ಮುಜುಗರ ಆಗುತ್ತಿದೆ. 87 ಕೋಟಿ ಹಗರಣದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾ?  ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾಲೆಳೆದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,   ಹೆಚ್ ಡಿಕೆ ಮೇಲೆ ಆರೋಪ ಇಲ್ವಾ ಎಂದು ನಾಗೇಂದ್ರ ಹೇಳಿದ್ದಾರೆ ನನ್ನ ಮೇಲೆ ಇರೋದು ರಾಜಕೀಯ ಆರೋಪ. ನಾನು ದುಡ್ಡು ಹೊಡೆದಿದ್ದೇನೆ ಎಂದು ಎಲ್ಲೂ ಇಲ್ಲ. 14 ವರ್ಷದಿಂದ ಆರೋಪವನ್ನ ಜೀವಂತ ಇಟ್ಟುಕೊಂಡಿದ್ದಾರೆ ನಾನು ಎರಡು ಬಾರಿ ಸಿಎಂ ಆಗಿದ್ದಾಗ ಮುಚ್ಚಿ ಹಾಕಬಹುದಿತ್ತು ಆರೋಪ ಮಾಡಿರೋರು ತನಿಖೆ ನಡೆಸಲು ಎಂದು ಬಿಟ್ಟಿದ್ದೇನೆ.  ಹಣ ಹೊಡೆದಿರುವ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದರು.87 ಕೋಟಿ ರೂ. ಹಗರಣದ ಮುಜುಗರ nagendra

ಹಗರಣ ಮಾಡಿದ್ರೆ ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಸರ್ಕಾರ ಹಣ ಖರ್ಚು ಮಾಡಿ ಅಭಿವೃದ್ದಿ ಕಾರ್ಯಕ್ರಮ ಮಾಡಬೇಕಿತ್ತು.  ಆಗ 600 ಕೋಟಿ ಅವ್ಯವಹಾರ ಆಗಿದೆ ಎಂದು ಸಮಿತಿ ಮಾಡಿದರು.  ಅಭಿವೃದ್ದಿ ಹೆಸರಿನಲ್ಲಿ ಲೂಟಿ ಆಗಿದೆ ಎಂದು ಸಮಿತಿ ರಚಿಸಿದ್ದರು.  ಆದರೆ ಆ ಸದನ ಸಮಿತಿ ವರದಿ ಕೊಟ್ರಾ?  ಆ ವರದಿಯಲ್ಲಿ ಏನಿದೆ? ಬಹಳ ಜನ ರಾಜೀನಾಮೆ ಕೊಡುತ್ತೀನಿ ಅಂತೇಳಿ ಹೇಗಿದ್ದಾರೆ ನೋಡಿ ಎಂದು ಟಾಂಗ್ ಕೊಟ್ಟರು.87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ jk02_new jk02 new

Key words: Nagendra, resigned, embarrassment, scam, Union Minister, HDK