Friday, August 28, 2026

BDA Apartments

Home Front Page ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ- ಸಚಿವ ರಾಮಲಿಂಗರೆಡ್ಡಿ

ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ- ಸಚಿವ ರಾಮಲಿಂಗರೆಡ್ಡಿ

ಮೈಸೂರು,ಆಗಸ್ಟ್,28,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಿದ್ದತೆ ಆರಂಭವಾಗಿದ್ದು ಗಜಪಡೆ ಆನೆಗಳು ಕಾಡಿನಿಂದ ನಾಡಿಗೆ ಬಂದು ಇಂದು ಮೈಸೂರು ಅರಮನೆ ಆವರಣ ಪ್ರವೇಶಿಸಿವೆ. ಈ ಮಧ್ಯೆ ಈ ಬಾರಿ ಅಭಿಮನ್ಯು ನಿವೃತ್ತಿಯಾದ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಹೊಸ ಆನೆಯನ್ನ ಆಯ್ಕೆ ಮಾಡಬೇಕಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಅರಣ್ಯ ಸಚಿವ ರಾಮಲಿಂಗರೆಡ್ಡಿ, ಗಜಪಡೆಯ ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಬಂದಿವೆ. ತಾಲೀಮು ಹಂತ ಪೂರ್ಣವಾದ ಮೇಲೆ ಅಂಬಾರಿ ಹೊರುವ ಆನೆಯ ಆಯ್ಕೆ ಆಗುತ್ತೆ ಅಂಬಾರಿ ಹೊರಲು ಯಾವ ಆನೆ ಸೂಕ್ತ ಎಂದು ತೀರ್ಮಾನ ಮಾಡುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words:  Mysore dasara-ambari, Elephant, Minister, Ramalingareddy