Monday, August 17, 2026

BDA Apartments

Home Front Page ಹನೂರು ಶೂಟೌಟ್ ಪ್ರಕರಣ: ಸದನದಲ್ಲಿ ಸ್ಪಷ್ಟನೆ ಕೊಟ್ಟ ಸಚಿವ ರಾಮಲಿಂಗರೆಡ್ಡಿ

ಹನೂರು ಶೂಟೌಟ್ ಪ್ರಕರಣ: ಸದನದಲ್ಲಿ ಸ್ಪಷ್ಟನೆ ಕೊಟ್ಟ ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು, ಆಗಸ್ಟ್, 17,2026 (www.justkannada.in):  ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಈ ಕುರಿತು ಪ್ರಸ್ತಾಪವಾಗಿದ್ದು ಉತ್ತರ ನೀಡಿದ ಸಚಿವ ರಾಮಲಿಂಗರೆಡ್ಡಿ, ಮೃತಪಟ್ಟವರು ಅರಣ್ಯದೊಳಗೆ 5 ರಿಂದ 8 ಕಿಲೋಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಅರಣ್ಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಶೂಟೌಟ್ ಮಾಡಿಲ್ಲ, ಆತ್ಮರಕ್ಷಣೆಗಾಗಿ ಹಾಗೂ ಕತ್ತಲಿನಲ್ಲಿ ಈ ಘಟನೆ ನಡೆದಿದೆ ಸಿಬ್ಬಂದಿಯ ತಪ್ಪು ಕಂಡುಬಂದರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವಿಧಾನಪರಿಷತ್ ನಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಮೃತಪಟ್ಟವರ ಕುಟುಂಬಸ್ಥರು ದೂರು ನೀಡಿದ್ದಾರೆ.  ನಾಡ ಬಂದೂಕು, 4 ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಆತ್ಮರಕ್ಷಣೆಗಾಗಿ ಸಿಬ್ಬಂದಿ ಗುಂಡಿನ ದಾಳಿ ಮಾಡಿದ್ದಾರೆ.  ಅರಣ್ಯ ಗಡಿಯಿಂದ 4 ಕಿ.ಮೀ ಒಳಗೆ ಘಟನೆ ಆಗಿದೆ,   ಆರೋಪಿತರು ಶಸ್ತ್ರಾಸ್ತ್ರಧಾರಿಗಳಾಗಿ ಹೋಗಿದ್ದಾರೆ.  ಅವರ ದನಗಳು ಕಳೆದ ಬಗ್ಗೆ ದೂರು ದಾಖಲಾಗಿಲ್ಲ. ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದೇವೆ ಎಂದು ತಿಳಿಸಿದರು.

Key words: Hanur shootout case, Minister, Ramalingareddy, clarification