Thursday, August 13, 2026

BDA Apartments

Home Front Page ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ

ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,13,2026 (www.justkannada.in):  ನಾನು ಮೊದಲ ಬಾರಿಗೆ ಸಚಿವನಾಗಿದ್ದೇನೆ . ಮೊದಲ ಬಾರಿಗೆ ಸಭಾನಾಯಕನಾಗಿದ್ದೇನೆ. ವಿಪಕ್ಷಗಳನ್ನ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು ಈ ಸಂಬಂಧ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ ವಿಪಕ್ಷಗಳನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ.   ಬಿಡದಿ ನಾಗೇಂದ್ರ ವಿಚಾರದಲ್ಲಿ ಚರ್ಚೆಯಾಗಿದೆ.  ಸಹಜವಾಗಿಯೇ ಸವಾಲು ಇದೆ. ಎಲ್ಲದಕ್ಕೂ ತಂದೆಯ ಸಲಹೆ ಪಡೆಯಲು ಸಾಧ್ಯವಿಲ್ಲ. ಹಿರಿಯ ಶಾಸಕರ ಸಲಹೆ ಪಡೆಯುತ್ತೇನೆ  . ಸಿಎಂ ಕೂಡ ಸಲಹೆ ನೀಡಿದ್ದಾರೆ ಎಂದರು.

ವಿಧಾನ ಪರಿಷತ್​​ ಕಲಾಪದಲ್ಲಿ  ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೂತನ ಸಭಾ ನಾಯಕರೆಂದು ಹಂಗಾಮಿ ಸಭಾಪತಿ ಪುಟ್ಟಣ್ಣ ಘೋಷಣೆ ಮಾಡಿದರು. ಆ ಬಳಿಕ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಅವರು, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಅನುಭವ ಕಡಿಮೆ ಇರುವ ಕಾರಣ ಏನಾದರೂ ತಪ್ಪಾದರೆ ಸರಿಪಡಿಸಿ ಮಾರ್ಗದರ್ಶನ ನೀಡುವಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಅವರು ಮನವಿ ಮಾಡಿದರು.

Key words: Session, Minister, Yathindra Siddaramaiah. Ready, face,  opposition Party