Monday, August 10, 2026

BDA Apartments

Home Front Page ಬಿಡದಿ ಟೌನ್ ಶಿಪ್ ವಿರುದ್ದದ ಹೋರಾಟಕ್ಕೆ ಮಾಜಿ ಪ್ರಧಾನಿ HDD ಎಂಟ್ರಿ: ಸಿಎಂ ಡಿಕೆಶಿ ವಿರುದ್ದ...

ಬಿಡದಿ ಟೌನ್ ಶಿಪ್ ವಿರುದ್ದದ ಹೋರಾಟಕ್ಕೆ ಮಾಜಿ ಪ್ರಧಾನಿ HDD ಎಂಟ್ರಿ: ಸಿಎಂ ಡಿಕೆಶಿ ವಿರುದ್ದ ಗುಡುಗು

ರಾಮನಗರ,ಆಗಸ್ಟ್,10,2026 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಮಾಣಕ್ಕೆ ಮುಂದಾಗಿರುವ ಬಿಡದಿ ಟೌನ್ ಶಿಪ್ ವಿರುದ್ದ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದ್ದು 2ನೇ ದಿನವಾದ ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೋರಾಟಕ್ಕೆ ಚಾಲನೆ ನೀಡಿದರು.

2ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಸಿಎಂ ಡಿಕೆಶಿ ಅವರೇ ಎರಡು ವರ್ಷ ಆಡಳಿತ ಮಾಡಿ ರೈತರ ಬದುಕನ್ನ ಹಾಳು ಮಾಡಬೇಡಿ ಎಂದು ಆಗ್ರಹಿಸಿದರು.

ಯಾರಿಗಾಗೀ ಈ ಯೋಜನೆ ಮಾಡುತ್ತಿದ್ದೀರಿ. ರೈತರರ ಬದುಕನ್ನ  ಹಾಳುಮಾಡಬೇಡಿ. ರೈತರಿಂದ ಬಲವಂತವಾಗಿ ಜಮೀನು ವಶಪಡಿಸಿಕೊಳ್ಳುತ್ತಿರುವುದು ತಪ್ಪು . ಸಿಎಂ ಡಿಕೆಶಿ ಅವರೇ ಜನರ ಮುಂದೆ ಸತ್ಯ ಹೇಳಿ. ಯೋಜನೆಯನ್ನ ರದ್ದು ಮಾಡಿ   ಎಂದು ಹೆಚ್ ಡಿಡಿ ಗುಡುಗಿದರು.

Key words: Former PM, HD Devegowda, fight, against, Bidadi Township