Friday, September 25, 2026

BDA Apartments

Home Front Page ಮೈಸೂರು: ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೇತಿ

ಮೈಸೂರು: ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೇತಿ

ಮೈಸೂರು, ಆಗಸ್ಟ್,8,2026 (www.justkannada.in):  ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ದೈಹಿಕ ಶಿಕ್ಷಣ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ  ವಿದ್ಯಾರ್ಥಿನಿಯರಿಗಾಗಿ ಮಹಿಳೆಯರ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಅವರಣದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲೀಲಾವತಿ ಎನ್.ಕೆ ಅವರು,  ಯಾವುದಾದರೂ ಒಂದು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲೇಬೇಕು .ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ಕರಾಟೆ ಕ್ರೀಡಾಪಟು ಹಾಗೂ ಅಂತರರಾಷ್ಟ್ರೀಯ ತೀರ್ಪುಗಾರರು ಭಾರತಿ ಆನಂದ್  ಮತ್ತು ರಾಷ್ಟ್ರೀಯ ಕ್ರೀಡಾಪಟು ಮತ್ತು ತೀರ್ಪುಗಾರ  ಶ್ರೇಯಸ್ ಕುಮಾರ್  ಅವರು ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು.ಮೈಸೂರು mysore maharani collage

ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ. ಅವರು ವಿದ್ಯಾರ್ಥಿಗಳಿಗೆ ಈ ತರಬೇತಿಯು ಅತ್ಯಂತ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೇತ...

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹ ಸಂಚಾಲಕ ಡಾ. ಚೇತನ್ ಮಲಗಾವಿ, ಕಾಲೇಜಿನ ಅಧ್ಯಾಪಕರು,  ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Mysore, Maharani College, Self-defense skills, training, students