Sunday, September 20, 2026

BDA Apartments

ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ 75ನೇ ಹುಟ್ಟುಹಬ್ಬ ಆಚರಣೆ BDA JK_Adv BDA...
Home Front Page ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ 75ನೇ ಹುಟ್ಟುಹಬ್ಬ ಆಚರಣೆ

ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ 75ನೇ ಹುಟ್ಟುಹಬ್ಬ ಆಚರಣೆ

ಮೈಸೂರು,ಆಗಸ್ಟ್,6,2026 (www.justkannada.in):  ಮೈಸೂರು ಜಿಲ್ಲಾ ಡಾ. ಜಿ ಪರಮೇಶ್ವರ್ ಅಭಿಮಾನಿಗಳ ಬಳಗದ ವತಿಯಿಂದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ 75 ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.

ನಗರದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈಡುಗಾಯಿ ಸಮರ್ಪಿಸಿ, ಸಿಹಿ ವಿತರಿಸುವ ಮೂಲಕ ಡಿಸಿಎಂ ಡಾ.ಜಿ. ಪರಮೇಶ್ವರ್  ಅಭಿಮಾನಿಗಳು  ಹುಟ್ಟುಹಬ್ಬ ಆಚರಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ  ಎಚ್. ಎ. ವೆಂಕಟೇಶ್ ಮಾತನಾಡಿ, ಉಪಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಜಿ ಪರಮೇಶ್ವರ್ ಅವರು ನಾಡು ಕಂಡಂತಹ ಪ್ರಜ್ಞಾವಂತ ನಾಗರೀಕ ನಡವಳಿಕೆಯ ಉತ್ತಮ ಗುರಿ ಹೊಂದಿರುವ ಅಪರೂಪದ ರಾಜಕಾರಣಿ. ರಾಜಕಾರಣವನ್ನು ಅಧಿಕಾರವೆಂದು ತಿಳಿದು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಪರಮೇಶ್ವರ್ ಅವರು ತಮ್ಮ ಉದಾತ್ತವಾದ ನಿಲುವು , ಗುರಿ ಹಾಗೂ ಜ್ಞಾನದಿಂದ ಸಂಶೋಧನೆಯ ಶಕ್ತಿಯಿಂದ ಹೊಸದಾದ ಒಂದು ಗುರುತನ್ನು ಸಮಾಜದಲ್ಲಿ ಹೊಂದಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ದೀರ್ಘಕಾಲ ಸಚಿವರಾಗಿ ಆಡಳಿತ ನಡೆಸಿರುವ ಅನುಭವ ಹೊಂದಿದ್ದಾರೆ. ಇವರು ನಿರ್ವಹಿಸಿದ ಖಾತೆಗಳಲ್ಲಿ ಸಮರ್ಥವಾದ ಆಡಳಿತವನ್ನು ಕೊಟ್ಟಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಭಾರತ ದೇಶದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ ಹಾಗೂ ಗುರುತಿಸಲ್ಪಟ್ಟ ರಾಜ್ಯವಾಗಿರಲು ಉನ್ನತ ಶಿಕ್ಷಣ ಸಚಿವರಾಗಿ ನೀಡಿದ ಆಡಳಿತವೂ ಒಂದು ಕಾರಣ. ಗೃಹ ಸಚಿವರಾಗಿ ಕೋಮು ದ್ವೇಷದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಉಡುಪಿ ಕಾರವಾರ ಶಿವಮೊಗ್ಗ ಚಿಕ್ಕಮಂಗಳೂರು ಇನ್ನಿತರ ಕಡೆಗಳಲ್ಲಿ ಸಾಕಷ್ಟು ಬದಲಾವಣೆ ತಂದು ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನೈತಿಕ ಪೊಲೀಸ್ ಗಿರಿಯನ್ನು ತಡೆಗಟ್ಟಲು ಶ್ರಮಿಸಿದ್ದಾರೆ ಎಂದು ಗುಣಗಾನ ಮಾಡಿದರು.ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ 75ನೇ ಹುಟ್ಟುಹಬ್ಬ ಆಚರಣೆ parameshwar bi...

ಡಾ. ಪರಮೇಶ್ವರ್ ಅವರು ಸೌಮ್ಯ ನಡುವಳಿಕೆಯ ಅಗಾದವಾದ ಬುದ್ಧಿಯನ್ನು ಹೊಂದಿರುವ ವ್ಯಕ್ತಿ. ತುಳಿತಕೊಳಪಟ್ಟ ಸಮಾಜದಿಂದ ಬಂದು ಎಲ್ಲಾ ಸಮುದಾಯಗಳ ಒಳತಿಗಾಗಿ ಶ್ರಮಿಸುತ್ತಿದ್ದಾರೆ. ನೂತನವಾಗಿ ಕಂದಾಯ ಸಚಿವರಾಗಿ ಆಡಳಿತ ನಡೆಸುತ್ತಿರುವ ಡಾ. ಪರಮೇಶ್ವರ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.mysore jk02_new jk02 new

ಮೈಸೂರು ಜಿಲ್ಲಾ ಜಿ ಪರಮೇಶ್ವರ ಅಭಿಮಾನಿಗಳ ಅಧ್ಯಕ್ಷ ಸಿ. ಮಂಜುನಾಥ್, ಮಹೇಂದ್ರ ಕುಮಾರ್, ಎಂ. ಮಣಿಕಂಠ, ಪ್ರಸನ್ನ ಕಳಸ್ತವಾಡಿ, ಡೈರಿ ವೆಂಕಟೇಶ್, ಕುರುಬರಹಳ್ಳಿ ಕೋಟೆ ಮಂಜು, ಹೇಮಂತ್ ಕುಮಾರ್, ಬಿ.ಎಲ್ ಪುಟ್ಟಸ್ವಾಮಿ, ಹೈಕೋರ್ಟ್ ನ್ಯಾಯವಾದಿ ನಂಜುಂಡಸ್ವಾಮಿ,  ಎಚ್, ಎನ್. ಸುಶಾಂತ್, ಜೆ. ಪುನೀತ್ , ಎ .ಆದರ್ಶ್, ನಿಂಗು, ಪ್ರಕಾಶ್, ಕಿರಣ್, ಸೂರಿ, ಮಧು, ಸುಕುಮಾರ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Key words: DCM, Dr. G. Parameshwar, 75th birthday, celebration, Mysore