Sunday, September 20, 2026

BDA Apartments

Home Front Page ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ- ಹೆಚ್.ವಿಶ್ವನಾಥ್...

ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ- ಹೆಚ್.ವಿಶ್ವನಾಥ್ ಆರೋಪ

ಮೈಸೂರು,ಆಗಸ್ಟ್,5,2026 (www.justkannada.in): ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈ ತಪ್ಪುವದರಲ್ಲಿ ಮಾಜಿ ಸಿಎಂ ಕೈವಾಡ.  ಸಚಿವ ಸ್ಥಾನ ತಪ್ಪುವುದಕ್ಕೆ ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪುವದರಲ್ಲಿ ಮಾಜಿ ಸಿಎಂ ಕೈವಾಡವಿದೆ.  ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಅನುಗುಣವಾಗಿ ಸಂಪುಟವಿದೆ.  ಆದರೆ ಹಿರಿಯ ರಾಜಕಾರಣಿ ತನ್ವೀರ್ ಗೆ ಸಚಿವ ಸ್ಥಾನ ಕೊಡಬೇಕಿತ್ತು.  ತನ್ವೀರ್ ಗೆ ಸಚಿವ ಸ್ಥಾನ ನೀಡಿದರೇ ತಮ್ಮ ಮಗನ ಪ್ರಭಾವ ಕುಗ್ಗುತ್ತೆ.  ತಮ್ಮ  ಪುತ್ರನ ಪ್ರಭಾವ ಕುಗ್ಗುತ್ತೆ ಎಂದು ಸಚಿವ ಸ್ಥಾನ ತಪ್ಪಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕ ರಾಜ್ಯವನ್ನು ಹಾಳು ಮಾಡಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಹೋಗಬೇಕಿತ್ತು.  ಆದರೆ ದುರಂಹಕಾರದ ನಡೆಯಿಂಧ ಸಿದ್ದರಾಮಯ್ಯ ಹೋಗಲಿಲ್ಲ.  ಸಿದ್ದರಾಮಯ್ಯ ನಡವಳಿಕೆ ಸರಿಯಿಲ್ಲವೆಂದು ಹೇಳಿದ್ದು ನಾನು ಒಬ್ಬನೇ ಎಂದು ಎಂಎಲ್ ಸಿ  ಹೆಚ್.ವಿಶ್ವನಾಥ್ ಹರಿಹಾಯ್ದರು.ಹೆಚ್.ವಿಶ್ವನಾಥ್ ಆರೋಪ jk02_new jk02 new

Key words: Tanveer Sait, ministerial post, : former CM, MLC, H. Vishwanath