Thursday, September 17, 2026

BDA Apartments

Home Front Page ಕಾವೇರಿ ವಿಚಾರ: ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲ್ಲ- ಸಿಎಂ ಡಿಕೆ ಶಿವಕುಮಾರ್

ಕಾವೇರಿ ವಿಚಾರ: ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲ್ಲ- ಸಿಎಂ ಡಿಕೆ ಶಿವಕುಮಾರ್

ಮೈಸೂರು,ಆಗಸ್ಟ್,1,2026 (www.justkannada.in):  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ನುಡಿದರು.

ಸಿಎಂ ಆದ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಿಎಂ ಡಿಕೆ ಶಿವಕುಮಾರ್ ರೋಡ್ ಶೋ ನಡೆಸಿದರು. ಕಾರಂಜಿಕೆರೆಯಿಂದ ರೋಡ್ ಶೋ ಆರಂಭವಾಗಿದ್ದು ಈ ವೇಳೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ  ಅನ್ಯಾಯ ಆಗುವುದಿಲ್ಲ  ರಾಜ್ಯಕ್ಕೆ ಅನ್ಯಾಯ ಆಗಬಾರದು ಅಂತಾ ಸರ್ವಪಕ್ಷ ಸಭೆ ಕರೆದಿದ್ದೇನೆ.  ಎಲ್ಲಾ ಪಕ್ಷಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ  ಎಂದರು.ಕಾವೇರಿ ವಿಚಾರ krs

ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರುವ ವಿಚಾರ, ಪರಿಸ್ಥಿತಿ ಸರಿ ಇಲ್ಲದ ಕಾರಣ ಸಿಎಂ ವಿಜಯ್ ಬರುತ್ತಿಲ್ಲ. ಶಾಂತ ವಾತಾವರಣದಲ್ಲಿ ಚರ್ಚೆಯಾದರೇ ಫಲ ಕೊಡುತ್ತದೆ. ಪರಿಸ್ಥಿತಿ ಶಾಂತವಾದ ಮೇಲೆ ಸಿಎಂ ವಿಜಯ್ ಬರುತ್ತಾರೆ ಎಂದರು. ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲ್ಲ jk02_new jk02 new

Key words: Cauvery Dispute, CM, DK Shivakumar, Mysore