Tuesday, September 15, 2026

BDA Apartments

ನಾಳೆ ಆಂಧ್ರಪ್ರದೇಶ ಮತ್ತು ಮೈಸೂರು ಪ್ರವಾಸಕ್ಕೆ ಪ್ರಧಾನಿ ಮೋದಿ BDA JK_Adv BDA Adv
Home Front Page ನಾಳೆ ಆಂಧ್ರಪ್ರದೇಶ ಮತ್ತು ಮೈಸೂರು ಪ್ರವಾಸಕ್ಕೆ ಪ್ರಧಾನಿ ಮೋದಿ

ನಾಳೆ ಆಂಧ್ರಪ್ರದೇಶ ಮತ್ತು ಮೈಸೂರು ಪ್ರವಾಸಕ್ಕೆ ಪ್ರಧಾನಿ ಮೋದಿ

ಮೈಸೂರು,ಜುಲೈ,31,2026 (www.justkannada.in): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ನಾಳೇ ಆಂಧ್ರಪ್ರದೇಶ ಮತ್ತು ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧನಿ ಮೋದಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಪುರಂನಲ್ಲಿರುವ ʻಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼದ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ವೀಕ್ಷಿಸಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಅವರು ಭೋಗಾಪುರಂನಲ್ಲಿ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ 17,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ.ನಾಳೆ ಆಂಧ್ರಪ್ರದೇಶ ಮತ್ತು ಮೈಸೂರು ಪ್ರವಾಸಕ್ಕೆ ಪ್ರಧಾನಿ ಮೋದಿ ramakrishna ashrama

 ಮೈಸೂರು ಪ್ರವಾಸ..

ನಂತರ ಮಧ್ಯಾಹ್ನ 3:30ರ  ವೇಳೆಗೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು  ಶ್ರೀ ರಾಮಕೃಷ್ಣ ಆಶ್ರಮದಲ್ಲಿ ʻಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕʼವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು  ಮಾತನಾಡಲಿದ್ದಾರೆ.mysore jk02_new jk02 new

1892ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಐತಿಹಾಸಿಕ ಭೇಟಿ ನೀಡಿದ ಸ್ಮರಣಾರ್ಥ ವಿವೇಕ ಸ್ಮಾರಕ ನಿರ್ಮಿಸಲಾಗಿದೆ. ವಿವೇಕ ಸ್ಮಾರಕʼವು ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನದ ಮೂಲಕ ಯುವಕರಿಗೆ ಸ್ಫೂರ್ತಿ ನೀಡಲಿದೆ.

Key words: PM Modi, visit, Andhra Pradesh, Mysore, tomorrow