Friday, July 31, 2026

BDA Apartments

Home Front Page ನಾಳೆ ಮೈಸೂರಿನ JSS ಕಾನೂನು ಮಹಾವಿದ್ಯಾಲಯದಲ್ಲಿ ‘ದೀಕ್ಷಾರಂಭ-2026’ ಕಾರ್ಯಕ್ರಮ

ನಾಳೆ ಮೈಸೂರಿನ JSS ಕಾನೂನು ಮಹಾವಿದ್ಯಾಲಯದಲ್ಲಿ ‘ದೀಕ್ಷಾರಂಭ-2026’ ಕಾರ್ಯಕ್ರಮ

ಮೈಸೂರು,ಜುಲೈ,31,2026 (www.justkannada.in): ಜೆಎಸ್‌ಎಸ್ ಕಾನೂನು ಮಹಾವಿದ್ಯಾಲಯ, ಮೈಸೂರು ವತಿಯಿಂದ ನೂತನ ವಿದ್ಯಾರ್ಥಿಗಳಿಗಾಗಿ ‘ದೀಕ್ಷಾರಂಭ-2026’ ಎಂಬ ಒಂದು ವಾರದ ಓರಿಯಂಟೇಷನ್ ಕಾರ್ಯಕ್ರಮವನ್ನು ಆಗಸ್ಟ್ 1, 2026ರಂದು(ನಾಳೆ) ಬೆಳಿಗ್ಗೆ 9.30ಕ್ಕೆ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಹೈಕೋರ್ಟ್ ಹಿರಿಯ ವಕೀಲ ಶಿವಪ್ರಸಾದ್ ಶಾಂತನಗೌಡರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ‘ಲಾ ಗೈಡ್ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕ ಮೈಸೂರಿನ ಹಿರಿಯ ವಕೀಲರು ಎಚ್.ಎನ್. ವೆಂಕಟೇಶ್ ಭಾಗವಹಿಸಲಿದ್ದಾರೆ .

HN Venkatesh

ನೂತನ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ, ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ವೃತ್ತಿಪರ ನೈತಿಕತೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಒಂದು ವಾರದ ಓರಿಯಂಟೇಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಬೆಳಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

Key words: ‘Deeksharambha-2026, JSS Law College, Mysore, tomorrow