ಬೆಂಗಳೂರು,ಜುಲೈ,31,2026 (www.justkannda.in): ತಮಿಳುನಾಡಿಗೆ ನೀರು ಹರಿಸುವಂತೆ ಸಿಎಂ ಡಬ್ಲ್ಯು ಆರ್ ಸಿ ನೀಡಿರುವ ಆದೇಶ ಖಂಡಿಸಿ ಆಗಸ್ಟ್ 13 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು ಬಂದ್ ಕೈಬಿಡುವಂತೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ವಿನಮ್ರವಾಗಿ ಮನವಿ ಮಾಡುತ್ತೇನೆ ದಯವಿಟ್ಟು ಬಂದ್ ಕೈಬಿಡಿ. ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಬೇಡ ನಾವು ನಿಮ್ಮ ವಿರುದ್ದ ಯಾವುದೇ ನಿರ್ಧಾರ ಕೈಗೊಳ್ಳಲ್ಲ ಎಂದಿದ್ದಾರೆ.
ರಾಜ್ಯದ ಹಿತಕ್ಕಾಗಿ ಒಳ್ಳೆಯ ನಿರ್ಧಾರ ಮಾಡುತ್ತೇವೆ. ಕರ್ನಾಟಕ ಬಂದ್ ನಿಂದ ಜನರಿಗೆ ತೊಂದರೆಯಾಗುತ್ತದೆ. ಕರ್ನಾಟಕ ಬಂದ್ ಬೇಡ. ಬಂದ್ ನಿಂದ ಪರಿಹಾರ ಸಿಗಲ್ಲ ಎಂದು ಕನ್ನಡಪರ ಸಂಘಟನೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
Key words: Cauvery dispute, request, bandh, CM DK Shivakumar







