Sunday, September 13, 2026

BDA Apartments

Home Crime ಮುಸ್ಲೀಮರ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ: CT ರವಿ ವಿರುದ್ದ FIR: ವಿಚಾರಣೆಗೆ ಬರುವಂತೆ ನೋಟಸ್

ಮುಸ್ಲೀಮರ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ: CT ರವಿ ವಿರುದ್ದ FIR: ವಿಚಾರಣೆಗೆ ಬರುವಂತೆ ನೋಟಸ್

ಚಿಕ್ಕಮಗಳೂರು,ಜುಲೈ,27,2026 (www.justkannada.in):  ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿರುದ್ದ ಮುಸ್ಲೀಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಕೇಳಿ ಬಂದಿದ್ದು, ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ 353(2) ಅಡಿ ಎಫ್ ಐಆರ್  ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಎಂಎಲ್ ಸಿ ಸಿಟಿ ರವಿಗೆ ಪೊಲೀಸರು ಎರಡು ನೋಟಿಸ್ ಜಾರಿ ಮಾಡಿದ್ದಾರೆ.  ಇಂದು ಬೆಳಿಗ್ಗೆ 11 ಗಂಟೆಗೆ ಹಾಜಾರಾಗಲು ಸೂಚಿಸಿದ್ದು  ಸಿ.ಟಿ ರವಿ ಅವರು 7 ದಿನಗಳ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.  ಆದರೆ ಸಮಯ ನೀಡಲು ನಿರಾಕರಿಸಿರುವ ಪೊಲೀಸರು ಇಂದೇ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.ಮುಸ್ಲೀಮರ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ jk02_new jk02 new

ಸಿ.ಟಿ ರವಿ ಅವರ ವಿರುದ್ದ ಮುಸ್ಲೀಮರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ  ಬಸವನಹಳ್ಳಿಯಲ್ಲಿರುವ ನಿವಾಸಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಡಿಎಆರ್ ಸ್ಥಳೀಯ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

Key words: MLC, CT Ravi, Notice Police