ಬಳ್ಳಾರಿ,ಜುಲೈ,27,2026 (www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಕೆಪಿಎಸ್ ಸಿ ಅಕ್ರಮದ ಬಗ್ಗೆ ಹೋರಾಡಲಿ ಎಂದು ಮಾಜಿ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕ್ಕೆ ಯಾವಾಗ ಬರುತ್ತಾರೆ. ನೀಟ್ ಅಕ್ರಮದ ಬಗ್ಗೆ ಹೋರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ ಅದೇ ರೀತಿ ಕರ್ನಾಟಕಕ್ಕೆ ಬಂದು ಕೆಪಿಎಸ್ ಸಿ ಅಕ್ರಮದ ಬಗ್ಗೆ ಹೋರಾಡಲಿ. ಕೆಪಿಎಸ್ ಸಿ ಅಕ್ರಮದ ಬಗ್ಗೆ ಯಾರು ರಾಜೀನಾಮೆ ನೀಡುತ್ತಾರೆ? ರಾಹುಲ್ ಗಾಂಧಿ ಕಾರಿನ ಹಿಂದೆ ಸಿಎಂ ಡಿಕೆಶಿ ಬಾಡಿಗಾರ್ಡ್ ರೀತಿ ಓಡಾಡುತ್ತಿದ್ದಾರೆ. ಕೆಪಿಎಸ್ಸಿ ನೇಮಕಾತಿಯಲ್ಲಿ ದೊಡ್ಡ ಮಟ್ಟ ಭ್ರಷ್ಟಾಚಾರ ನಡೆದಿದೆ. ಇದರ ಹೊಣೆ ಹೊತ್ತು ಸಿಎಂ ಆಗಲಿ ಪ್ರಿಯಾಂಕ್ ಖರ್ಗೆ ಆಗಲಿ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿ ಒಂದಷ್ಟು ಸಚಿವರು ಮಾತ್ರ ಖುಷಿಯಾಗಿದ್ದಾರೆ. ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡುತ್ತಿರುವುದೇ ಈ ಖುಷಿಗೆ ಕಾರಣ. ಹೈಕಮಾಂಡ್ ಮೆಚ್ಚಿಸಲು ಹಣ ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯಗಿಂತ ಡಿಕೆ ಶಿವಕುಮಾರ್ ಉತ್ತಮವಾಗಿ ಕಪ್ಪ ಕಾಣಿಕೆ ನೀಡುತ್ತಿದ್ದಾರೆ ಎಂದರು.
Key words: Rahul Gandhi, fight, against, KPSC ,Sriramulu







