ಬೆಂಗಳೂರು,ಜುಲೈ,25,2026 (ww.justkannada.in): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ವತಿಯಿಂದ ಪ್ರತಿಭಟನೆ ನಂತರ ಪ್ರಧಾನಿ ಮೋದಿ ವಿಡಿಯೋ ಸಂದೇಶ ಕುರಿತು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗರ್ವ ಅಹಂ ಇದೆ,. ಮೊದಲೇ ಮಧ್ಯಸ್ಥಿಕೆ ವಹಿಸಿದ್ದರೇ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಕೇವಲ ವಾಟ್ಸಪ್ ನಲ್ಲಿ ವಿಡಿಯೋ ಬಿಟ್ಟರೆ ಆಗುವುದಿಲ್ಲ ಸುದ್ದಿಗೋಷ್ಠಿ ಕರೆದು ಹೇಳಬೇಕಿತ್ತು. ಸಂದೇಶ ಕೊಡಬೇಕು ಎಂದು ಟಾಂಗ್ ಕೊಟ್ಟರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ..
ಸಚಿವ ಎಂ.ಬಿ ಪಾಟೀಲ್ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿದ್ದು ಇಲಾಖೆ ಕುರಿತು ಎಂ.ಬಿ ಪಾಟೀಲ್ ಚರ್ಚಿಸಿದ್ದಾರೆ ಎನ್ನಲಾಗಿದೆ.
Key words: Minister, MB Patil, PM Modi, CJP







