ನವದೆಹಲಿ,ಜುಲೈ,23,2026 (www.justkannada.in): ನೀಟ್ ಅಕ್ರಮ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಚ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿ ಚಾಟಿ ಬೀಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ನಿಮ್ಮ ಆಡಳಿತದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ನಶಿಸಿದೆ. ನಮಗೆ ಸುಳ್ಳು ಭರವಸೆಗಳು ಮತ್ತು ಸಣ್ಣ ಪುಟ್ಟ ಘೋಷಣೆಗಳು ಬೇಕಾಗಿಲ್ಲ. ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪೇಲೆಟ್ ಗನ್ ಬಳಕೆ. ಸ್ವಂತ ಮಕ್ಕಳಂತಿರುವ ಯುವಕರ ಮೇಲೆಯೇ ಕರುಣೆಯಿಲ್ಲದೆ ದೌರ್ಜನ್ಯ ಮಾಡಲಾಗಿದೆ. ಹೊರಗೆ ಬಂದು ರಸ್ತೆಯಲ್ಲಿ ರಕ್ತ ಸುರಿಸಿದ ಯುವಕರ ಕಣ್ಣುಗಳನ್ನು ನೋಡಿ ಎಂದು ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರನ್ನು ತಕ್ಷಣ ವಜಾಗೊಳಿಸಲು ಆಗ್ರಹಿಸಿದ ಖರ್ಗೆ, ದೌರ್ಜನ್ಯದ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ಕ್ಷಮೆ ಕೇಳಬೇಕು. ದಾಳಿಗೊಳಗಾದ ಪ್ರತಿಯೊಬ್ಬ ಯುವಕನಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
Key words: dismiss , Union Education Minister, Mallikarjuna Kharge, PM Modi







