Saturday, September 12, 2026

BDA Apartments

Home Front Page ನಮ್ಮ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದು ನೀವೇ- ಪ್ರಧಾನಿ ಮೋದಿ ವಿರುದ್ದ ರಾಹುಲ್ ಗಾಂಧಿ ಗುಡುಗು

ನಮ್ಮ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದು ನೀವೇ- ಪ್ರಧಾನಿ ಮೋದಿ ವಿರುದ್ದ ರಾಹುಲ್ ಗಾಂಧಿ ಗುಡುಗು

ನವದೆಹಲಿ,ಜುಲೈ,23,2026 (www.justkannada.in):  ನೀಟ್‍ ಅಕ್ರಮ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನೀವೇ ನಮ್ಮ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದೀರಿ. ಶಿಕ್ಷಣ ವ್ಯವಸ್ಥೆಯ ನಾಶ ಮತ್ತು ಕಬಳಿಕೆಗೆ ನೀವೇ ಪ್ರಚೋದನೆ ನೀಡಿದ್ದೀರಿ.  ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನೀವು ರಕ್ಷಣೆ ನೀಡಿದ್ದೀರಿ ಕೂಡಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ರಾಜೀನಾಮೆ ನೀಡಲಿ.  ವಿದ್ಯಾರ್ಥಿಗಳ ಬಳಿ ಕೇಂದ್ರ ಸರ್ಕಾರ ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ನಮ್ಮ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದು ನೀವೇ BDA JK_Adv BDA Adv

ಶಾಂತಿಯುತ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ,  ದಾಳಿ ನಡೆಸಿದವರ ವಿರುದ್ದ ತಕ್ಷಣವೇ ಸೂಕ್ತಕ್ರಮಕ್ಕೆ ಒತ್ತಾಯಿಸಿದ್ದಾರೆ.  ಯುವಕರ ಭವಿಷ್ಯ ಹಾಳು ಮಾಡಿದ ಸರ್ಕಾರ ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಶಿಕ್ಷಣ ವ್ಯವಸ್ಥೆ ಹಾಳು ಮಾಡಿದವರಿಗೆ ಕೇಂದ್ರ ರಕ್ಷಣೆ ನೀಡಿದೆ ಎಂದು ಹರಿಹಾಯ್ದರು.ಪ್ರಧಾನಿ ಮೋದಿ ವಿರುದ್ದ ರಾಹುಲ್ ಗಾಂಧಿ ಗುಡುಗು jk02_new jk02 new

Key words: ruined future, our youth, Rahul Gandhi, against,  PM Modi