ಬೆಂಗಳೂರು,ಜುಲೈ,18,2026 (www.justkannada.in): ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ನಾವು ಸಹ ತುಮಕೂರಿನಲ್ಲಿ ಏರ್ ಪೋರ್ಟ್ ಆಗಲಿ ಅಂತ ಇಚ್ಛೆ ವ್ಯಕ್ತಪಡಿಸಿದ್ದೇವೆ. ಟೆಕ್ನಿಕಲ್ ಕಮಿಟಿಯವರು ಎರಡು ಜಾಗ ನೋಡಿದ್ದಾರೆ. ಸಚಿವ ಎಂ. ಬಿ ಪಾಟೀಲ್ ನೆಲ ಮಂಗಲ ಅಥವಾ ಬಿಡದಿ ಅಂತಾ ಹೇಳಿದ್ದಾರೆ. ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣವಾದರೆ ಬಹಳ ಸಂತೋಷ. ಸರ್ಕಾರ ಅಂತಿಮವಾಗಿ ಏನು ಕ್ರಮ ತೆಗೆದುಕೊಳ್ಳಲಿದೆ ನೋಡೋಣ ಎಂದರು.
ಬಿಡದಿ ಟೌನ್ ಶಿಪ್ ವಿರೋಧಿಸಿ ಬಿಜೆಪಿ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಯವರಿಗೆ ಹೇಗೆಬೇಕೋ ಹಾಗೆ ಮಾಡಲಿ. ಅಭಿವೃದ್ಧಿ ದೃಷ್ಠಿಯಿಂದ ನಾವು ಟೌನ್ ಶಿಪ್ ಮಾಡುತ್ತಿರುವುದು. ಹೆಚ್ ಡಿಕೆ ಈ ಹಿಂದೆ ಇದನ್ನೇ ಮಾಡಿದ್ದು, ಈಗ ಸಿಎಂ ಡಿಕೆಶಿ ಒತ್ತಾಯವಾಗಿ ಜಮೀನು ಪಡೆಯುತ್ತಿಲ್ಲ ರಾಜಕೀಯವಾಗಿ ನೋಡದೇ ಅಭಿವೃದ್ದಿ ದೃಷ್ಠಿಯಿಂದ ನೋಡಬೇಕು ಎಂದರು.
Key words: airport , Tumkur, DCM, Parameshwar







