ಬೆಂಗಳೂರು,ಜುಲೈ,16,2026 (www.justkannada.in): ಹೆಚ್ ಎಂಟಿ ಕಾರ್ಕಾನೆಗೆ ಹೊಸ ರೂಪ ನೀಡಲು ನಿರ್ಧರಿಸಿದ್ದೇವೆ. ಅದರೆ ರಾಜ್ಯ ಸರ್ಕಾರ ಹೆಚ್ ಎಂಟಿ ಕಾರ್ಖಾನೆ ಮೇಲೆ ದಾಳಿ ಮಾಡುತ್ತಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಿತ್ಯ ಒಂದಿಲ್ಲೊಂದು ರೀತಿ ಭೂಮಿ ಒಡೆಯುವ ರೀತಿ ರಾಜ್ಯ ಸರ್ಕಾರದವರು ಹೊರಟಿದ್ದಾರೆ. ಕಾನೂನು ಪ್ರಕಾರ ಮೈಸೂರು ಮಹಾರಾಜರು ಉಡುಗೊರೆ ನೀಡಿದ್ರು. ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದರು.
ಹೆಚ್ ಎಂಟಿ ವಿಷಯದಲ್ಲಿ ಯಾಕೆ ಇಷ್ಟು ಚರ್ಚೆಯಾಗುತ್ತಿದೆ. ಮೋದಿ ನಾಯಕತ್ವದಲ್ಲಿ ನಾನು ಸಚಿವನಾಗಲು ಅವಕಾಶ ಸಿಕ್ಕಿದೆ. ನನಗೆ ಬೃಹತ್ ಕೈಗಾರಿಕೆ ಉಕ್ಕು ಖಾತೆ ಜವಾಬ್ದಾರಿ ನೀಡಿದ್ದಾರೆ. ಎರಡ್ಮೂರು ನಿರ್ಧಾರ ಮಾಡಿ 2 ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ. ಕಾರ್ಖಾನೆ ಪುನಾರಂಭಿಸಲು ನಾವು ತೀರ್ಮಾನ ಮಾಡಿದ್ದೇವೆ ಎಂದರು.
ಹೆಚ್ ಎಂಟಿ ಕಾರ್ಖಾನೆ ಶುರುವಾದಾಗ ನಾವು ಸಣ್ಣ ಮಕ್ಕಳು . ಬೆಳಿಗ್ಗೆ 7 ಗಂಟೆಗೆ ಹೆಚ್ ಎಂಟಿ ಕಂಪನಿ ಬಸ್ ಗಳು ಓಡಾಡುತ್ತಿದ್ದವು. ಒಂದು ಕಾಲದಲ್ಲಿ ಹೆಚ್ ಎಂಟಿ ಉತ್ತಮ ಕಾರ್ಖಾನೆಯಾಗಿತ್ತು. ಕಾರ್ಮಿಕರ ದುಡಿಮೆಯಿಂದ 6 ಕಡೆ ದೊಡ್ಡ ಕಾರ್ಖಾನೆ ನಿರ್ಮಾಣವಾಯತು. ಹೆಚ್ ಎಂಟಿ ಕಾರ್ಖಾನೆ ಅದ್ಬುತವಾಗಿ ನಡೆಯುತ್ತಿತ್ತು. ಕಾರ್ಖಾನೆಯಲ್ಲಿ ಸಣ್ಣಪುಟ್ಟ ಕಾರ್ಮಿಕರಿದ್ದಾರೆ ಹೆಚ್ ಎಂಟಿ ಮುಖ್ಯ ಕಾರ್ಖಾನೆ ಈಗ ಶೂಟಿಂಗ್ ಗೆ ಬಳಕೆಯಾಗುತ್ತಿದೆ ಎಂದರು.
Key words: new look, HMT factory, Union Minister, HDK







