Sunday, August 30, 2026

BDA Apartments

Home Crime ನಕಲಿ ದಾಖಲೆ ಸೃಷ್ಠಿಸಿ ಮದ್ಯದಂಗಡಿ ಓಪನ್: PDO ವಿರುದ್ಧ ದೂರು

ನಕಲಿ ದಾಖಲೆ ಸೃಷ್ಠಿಸಿ ಮದ್ಯದಂಗಡಿ ಓಪನ್: PDO ವಿರುದ್ಧ ದೂರು

ಮೈಸೂರು,ಜುಲೈ,16,2026 (www.justkannada.in): ನಕಲಿ ದಾಖಲೆ ಸೃಷ್ಠಿಸಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವ ಆರೋಪದ ಮೇಲೆ ಪಿಡಿಒ ವಿರುದ್ದ  ಮೈಸೂರು ಜಿಲ್ಲೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊತ್ತೇಗಾಲ‌ ಪಿಡಿಓ ನಾಗೇಂದ್ರ ಸೇರಿ ಬಾರ್ ಮಾಲೀಕರ ವಿರುದ್ಧ ವಕೀಲ ವಿ.ರವಿಕುಮಾರ್ ನೇತೃತ್ವದಲ್ಲಿ ಬಸವನಾಯ್ಕ‌ ಸೇರಿ ಹಲವರು ದೂರು ಸಲ್ಲಿಕೆ ಮಾಡಿದ್ದಾರೆ.

ಅಧಿಕೃತ ಸರ್ಕಾರಿ ದಾಖಲೆಗಳನ್ನ ತಿದ್ದಿದ್ದು, ಸರ್ಕಾರಿ ಡಿಮ್ಯಾಂಡ್ ದಾಖಲೆಗಳನ್ನ ಫೋರ್ಜರಿ ಮಾಡಿದ್ದಾರೆ. ಭೂ ಪರಿವರ್ತನೆ, ನಕ್ಷೆಗಳಿಲ್ಲದೆ ಕೃಷಿ ಜಮೀನಿನ ಜಾಗಕ್ಕೆ 11 ಬಿ ದಾಖಲೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕದೇವಮ್ಮ ತಾಯಿ ದೇವಸ್ಥಾನದ ಸಮೀಪ ಬಾರ್ ತೆರೆಯಲಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರನ್ನ ಕುಡುಕರನ್ನಾಗಿ ಮಾಡುತ್ತಿದ್ದಾರೆ. ಪರಿಸರ ಸೂಕ್ಷ್ಮವಲಯವನ್ನ ಹಾಳು ಮಾಡುತ್ತಿದ್ದಾರೆ. ಮದ್ಯದಂಗಡಿ ಮುಚ್ಚಿಸಿ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವಂತೆ ದೂರುದಾರರು ಆಗ್ರಹಿಸಿದ್ದಾರೆ.

Key words: Liquor store, opened , fake documents, Complaint, PDO, Mysore