ನಾಲ್ವರು ಡ್ರಗ್ಸ್ ಪೆಡ್ಲರ್ ಗಳ ಬಂಧನ:  34 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರು,ಜುಲೈ,15,2026 (www.justkannada.in):  ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿರುವ ಬೆಂಗಳೂರಿನ ಹೆಬ್ಬಾಳ ಪೊಲೀಸರು 34 ಕೋಟಿ ರೂ. ಮೌಲ್ಯದ 17 ಕೆಜಿ 580 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ನೈಜಿರಿಯಾ ಪ್ರಜೆ ಸೇರಿ ನಾಲ್ವರು ಬಂಧನವಾಗಿದೆ.  ದೆಹಲಿಯಲ್ಲಿ ನೈಜಿರಿಯಾ ಪ್ರಜೆ ಸೊಲೊಮನ್ ಟಚಿಕ್ಯೂ ಬೆಂಗಳೂರಿನಲ್ಲಿ ರಾಕಾಂಗ್ಮಿ ತನಿರೋಸ್, ಮೋಹನ್ ಜಾನ್ಸನ್ ಬಂಧಿತ ಆರೋಪಿಗಳು. ಈ ಮೂವರು ಮಣಿಪುರ ಮೂಳದವರು. 34 ಕೋಟಿ ರೂ. ಮೌಲ್ಯದ 17 ಕೆಜಿ 580 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಈ ಹಿಂದೆ. 34 ಕೋಟಿ ಮೌಲ್ಯದ 17 ಕೆಜಿ 400 ಗ್ರಾಂ ಡ್ರಗ್ಸ್ ಜಪ್ತಿ ಮಾಡಿದ್ದರು.  ಈ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನ ಹೆಬ್ಬಾಳ ಪೊಲೀಸರು ಬಂಧಿಸಿದ್ದರು.  ಬಳಿಕ ನೈಜಿರಿಯಾದಲ್ಲಿ ಕುಳಿತು ಆರೋಪಿಯಿಂದ ಬಂಧಿತನಿಗೆ ಮೆಸೇಜ್ ಮಾಡಲಾಗಿತ್ತು.   ಬೆಂಗಳೂರು ನಗರದಲ್ಲಿ ಪೆಡ್ಲಿಂಗ್ ಮಾಡುವುದಕ್ಕೆ ಕಷ್ಟ ಆಗುತ್ತಿದೆ.  ಕರ್ನಾಟಕ ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ ಎಂದು ಮೆಸೇಜ್ ಮಾಡಲಾಗಿತ್ತು. ಈ ನಡುವೆ ನಾಲ್ವರು ಡ್ರಗ್ಸ್ ಪೆಡ್ಲರ್ ರನ್ನು ಬಂಧಿಸಿದ್ದಾರೆ.

Key words: Four, drug, peddlers, arrested