ಬೆಂಗಳೂರು,ಜುಲೈ,14,2026 (www.justkannada.in): ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಮಚ್ಚಿನಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಪಿಎಸ್ ಐ ವಿರುದ್ದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭೈರಪ್ಪ ವಿರುದ್ದವೇ ಈ ಆರೋಪ ಕೇಳಿ ಬಂದಿರುವುದು . ಇದೀಗ ಕೆಂಗೇರಿ ಠಾಣಾ ಪೊಲೀಸರು ಪಿಎಸ್ ಐ ಭೈರಪ್ಪರನ್ನ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪತ್ನಿ ಮೇಲೆ ಕೊಲೆ ಯತ್ನ ಅಕ್ರಮ ಶಸ್ತ್ರಾಸ್ತ್ರಕಾಯ್ದೆ, ವರದಕ್ಷಿಣೆ ಕಿರುಕುಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೊದಲು ಕೆಂಗೇರಿ ಪೊಲೀಸರು ಎನ್ ಸಿಆರ್ ದಾಖಲಿಸಿದ್ದರು. ನಂತರ ಎಫ್ ಐಆರ್ ದಾಖಲಿಸಿದ್ದಾರೆ.
Key words: PSI, arrested , harassing, assaulting, wife






