Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಪ್ರಿಯಾಂಕ್ ಖರ್ಗೆ ಇರಾನ್-ಅಮೇರಿಕಾ ಯುದ್ದದಲ್ಲಿ ಬ್ಯುಸಿಯಾಗಿದ್ದಾರೆ- ಬಿವೈ ವಿಜಯೇಂದ್ರ ವ್ಯಂಗ್ಯ

ಪ್ರಿಯಾಂಕ್ ಖರ್ಗೆ ಇರಾನ್-ಅಮೇರಿಕಾ ಯುದ್ದದಲ್ಲಿ ಬ್ಯುಸಿಯಾಗಿದ್ದಾರೆ- ಬಿವೈ ವಿಜಯೇಂದ್ರ ವ್ಯಂಗ್ಯ

ಕಲಬುರಗಿ,ಜುಲೈ,14,2026 (www.justkannada.in):  ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಸೆಂಟ್ರಲ್ ಜೈಲಿನಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಬಿ.ವೈ ವಿಜಯೇದ್ರ, ಪ್ರಿಯಾಂಕ್ ಖರ್ಗೆ ಇರಾನ್- ಅಮೇರಿಕಾ ಯುದ್ದದಲ್ಲಿ ಬ್ಯುಸಿ ಇದ್ದಾರೆ.  ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಯುದ್ದದ ಬ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ತಮ್ಮ ಗೃಹ ಇಲಾಖೆಯ ಬಗ್ಗೆ ಗಮನಹರಿಸಬೇಕು ಎಂದು ಲೇವಡಿ ಮಾಡಿದರು.

ರಾಜ್ಯ ಗೃಹ ಸಚಿವರ ಕ್ಷೇತ್ರದಲ್ಲೇ ಭದ್ರತಾ ವೈಫಲ್ಯ ಸಂಭವಿಸಿ,  ಜೈಲಿನಿಂದ ಮೂವರು ಕೈದಿಗಳು ಪರಾರಿಯಾಗಿರುವುದು ಗಂಭೀರ ವಿಷಯವಾಗಿದೆ.  ಜೈಲು ಭದ್ರತಾ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.ಪ್ರಿಯಾಂಕ್ ಖರ್ಗೆ ಇರಾನ್ jk02_new jk02 new

Key words:  Priyank Kharge,  busy, Iran-US war, BY Vijayendra,  sarcastically