ಬೆಂಗಳೂರು,ಜುಲೈ,11,2026 (www.justkannada.in): ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಪುತ್ರಿ ವಿರುದ್ದ ಎಫ್ ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಕಲಿ ಆದಾಯ ಪ್ರಮಾಣ ಪತ್ರ ಬಗ್ಗೆ ದೂರು ಹಿನ್ನೆಲೆ ಎಫ್ ಐಆರ್ ಆಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೇ ಏನು ಮಾಡೋದು. ಇದು ನಮ್ಮ ಕೈಯಲ್ಲಿ ಇಲ್ಲ. ನನಗೆ ಇದನ್ನು ಬಿಟ್ಟರೆ ಕೆಎಟಿ, ಕೆಪಿಎಸ್ಸಿಯನ್ನೇ ರದ್ದು ಮಾಡ್ತೀನಿ ಎಂದರು.
ಎಲ್ಲರೂ ಸೇರಿ ತೀರ್ಮಾನ ಮಾಡಿದರೇ ಕೆಪಿಎಸ್ ಸಿ ಶುದ್ದೀಕರಣ ಮಾಡಬಹುದು. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ. ಕೆಪಿಎಸ್ ಸಿ ಅಧ್ಯಕ್ಷರ ವಿರುದ್ದ ರಾಜ್ಯಪಾಲರಿಂದ ಕ್ರಮ ಆಗಬೇಕು. ರಾಜ್ಯಪಾಲರು ಏನು ಮಾಡುತ್ತಾರೋ ನೋಡೋಣ. ಅವರಿಗೆ ದಾಖಲಾತಿ ಕೊಡುವುದು ನಮ್ಮ ಕೆಲಸ ಕೊಡುತ್ತೇವೆ ಎಂದರು.
Key words: Governor, action, against, KPSC, chairman, Home Minister, Priyank Kharge











