Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಈ ಬಾರಿಯೂ 11ದಿನ ದಸರಾ: ದಂತ ಭಗ್ನಅಭಿಮನ್ಯುವಿನಿಂದ ತೊಂದರೆ ಇಲ್ಲ- ಡಾ. ಶೆಲ್ವಪಿಳೈ ಅಯ್ಯಂಗಾರ್

ಈ ಬಾರಿಯೂ 11ದಿನ ದಸರಾ: ದಂತ ಭಗ್ನಅಭಿಮನ್ಯುವಿನಿಂದ ತೊಂದರೆ ಇಲ್ಲ- ಡಾ. ಶೆಲ್ವಪಿಳೈ ಅಯ್ಯಂಗಾರ್

ಮೈಸೂರು,ಜುಲೈ,11,2026 (www.justkannada.in): ಕಳೆದ ವರ್ಷದಂತೆ ಈ ಬಾರಿಯೂ ಕೂಡ 11 ದಿನ ನಾಡಹಬ್ಬ ದಸರಾ ನಡೆಯಲಿದೆ ಎಂದು ಹಿರಿಯ ವಿದ್ವಾಂಸ ಡಾ. ಶೆಲ್ವಪಿಳೈ ಅಯ್ಯಂಗಾರ್ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಶೆಲ್ವಪಿಳೈ ಅಯ್ಯಂಗಾರ್, ಕಳೆದ ವರ್ಷದಂತೆ ಈ ಬಾರಿ ಕೂಡ 11 ದಿನ ಮೈಸೂರು ದಸರಾ ನಡೆಯಲಿದೆ. ಈ ಬಾರಿ ಅಷ್ಟಮಿ ಎರಡು ದಿನ ಬರಲಿದೆ. ಕಳೆದ ವರ್ಷ ಪಂಚಮಿ‌ ಎರಡು ದಿನ ಬಂದಿತ್ತು. ದಸರಾ ಅಂದರೆ ದಶ+ಹರ ,ಹತ್ತು ದಿನಗಳ ಆಚರಣೆ. ಆದರೆ ಈ ಬಾರಿ 11 ದಿನ ಆಚರಣೆಗೆ ಪಂಚಾಂಗ ಕಾರಣ. ಅರಮನೆ ಹಾಗೂ ಸರ್ಕಾರದ ನಾಡಹಬ್ಬ 11 ದಿನ ನಡೆಯಲಿದೆ. ಚಾಮುಂಡಿಬೆಟ್ಟದಲ್ಲಿ ಮಾತ್ರ 10 ದಿನ ನಡೆಯಲಿದೆ. ಇದರಿಂದ ಯಾವುದೇ ಕೆಡಕು, ಅಶುಭ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದಂತ ಭಗ್ನಗೊಂಡ ಅಭಿಮನ್ಯು ಆನೆಯಿಂದ ತೊಂದರೆ ಇಲ್ಲ

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ದಂತ ಮುರಿದ ವಿಚಾರ, ವಿಘ್ನ ಅಥವಾ ಭಗ್ನ ಆದವುಗಳನ್ನ ಬಳಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ. ಶೆಲ್ವಪಿಳೈ ಅಯ್ಯಂಗಾರ್, ಹಿಂದಿನ ಕಾಲದಲ್ಲಿ ಪಟ್ಟದಹಸು, ಪಟ್ಟದ ಕುದುರೆ,‌ಪಟ್ಟದ ಆನೆ ಎಲ್ಲವೂ ಹೆಚ್ಚಾಗಿದ್ದವು. ಈಗ ಇರುವುದರಲ್ಲೇ‌ ತೃಪ್ತಿ ಪಡಬೇಕಾಗಿದೆ. ದಂತ ಭಗ್ನಗೊಂಡ ಅಭಿಮನ್ಯು ಆನೆಯಿಂದ ತೊಂದರೆ ಇಲ್ಲ ಎಂದರು.ಈ ಬಾರಿಯೂ 11ದಿನ ದಸರಾ jk02_new jk02 new

Key words: 11 days, Mysore Dasara, two days, Dr. Shelvapilai Iyengar