Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ

ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ

ಬೆಂಗಳೂರು,ಜುಲೈ,6,2026 (www.justkannada.in):  ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಖಾತೆ ಬದಲಾಯಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಗೆ ನೈಜ ಹೋರಾಟಗಾರರ ವೇದಿಕೆಯಿಂದ ಪತ್ರ ಬರೆಯಲಾಗಿದೆ.

ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಪತ್ರ ಬರೆದಿರುವ ಹೆಚ್ ಎಂ ವೆಂಕಟೇಶ್, ಯತೀಂದ್ರ ಸಿದ್ದರಾಮಯ್ಯ ಕುಟುಂಬ ವಿರುದ್ದ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಇದೆ. ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೇಸ್ ಇದೆ. ಹೈಕೋರ್ಟ್ ನಲ್ಲಿ ರಿಟ್,  ಇಡಿ ಕೂಡ ಪ್ರಕರಣ ದಾಖಲಿಸಿಕೊಂಡಿದೆ.  ಮುಡಾ ಕೇಸ್ ನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ತಂದೆ ತಾಯಿ ಆರೋಪಿತರು.  ಈ ಕೇಸ್ ವಿಚಾರಣೆಯಲ್ಲಿರುವಾಗ ನಗರಾಭಿವೃದ್ದಿ ಖಾತೆ ಸರಿಯಲ್ಲ ತಕ್ಷಣ ಜಾರಿಗೆ ಬರುವಂತೆ ನಗರಾಭಿವೃದ್ದಿ ಖಾತೆ ಯಿಂದ ಬಿಡುಗಡೆಗೊಳಿಸಿ ಬದಲಿ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ. ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ BDA JK_Adv BDA Adv

ತಂದೆ ತಾಯಿ ರಕ್ಷಣೆಗಾಗಿ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟುತ್ತದೆ. ಆರೋಪಿತರ ಮಗ ನಗರಾಭಿವೃದ್ದಿ ಖಾತೆಯ ಅಧಿಕಾರ ಸ್ಥಾನದಿಂದ ದೂರ ಸರಿಯಬೇಕು. ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗಳು ನಡೆಸಬೇಕಾಗುತ್ತದೆ.  ಆರೋಪಿತನ ಮಗನೇ ನಗರಾಭಿವೃದ್ಧಿ ಖಾತೆ ಹೊಂದಿದ್ದರೇ ತಪ್ಪಾಗುತ್ತದೆ.   ಹಾಗಾಗಿ ನಗರಾಭಿವೃದ್ದಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಹೆಚ್ ಎಂ ವೆಂಕಟೇಶ್ ಪತ್ರದಲ್ಲಿ ಮನವಿ ಮಾಡಿದ್ದಾರೆ.ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ jk02_new jk02 new

Key words: Letter, change,  Minister post, Yathindra Siddaramaiah,