Tuesday, August 18, 2026

BDA Apartments

Home Crime ಎರಡು BMTC  ಬಸ್ ಗಳ ನಡುವೆ ಭೀಕರ ಅಪಘಾತ: ಡ್ರೈವರ್ ಸ್ಥಿತಿ ಗಂಭೀರ

ಎರಡು BMTC  ಬಸ್ ಗಳ ನಡುವೆ ಭೀಕರ ಅಪಘಾತ: ಡ್ರೈವರ್ ಸ್ಥಿತಿ ಗಂಭೀರ

ಬೆಂಗಳೂರು,ಜುಲೈ,,4,2026 (www.justkannada.in):  ಎರಡು ಬಿಎಂಟಿಸಿ ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಬಿಎಂಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರಿನ ಹೃದಯಭಾಗ ಕೆಆರ್ ಸರ್ಕಲ್ ನಲ್ಲಿ ನಡೆದಿದೆ.

ಬಿಎಂಟಿಸಿ ಬಸ್ ಚಾಲಕ ಅಭಿಷೇಕ್ ಗಂಭೀರ ಗಾಯಗೊಂಡಿದ್ದು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಗ್ನಲ್ ನಲ್ಲಿ ನಿಂತಿದ್ದ ವಾಯುವಜ್ರ ಬಸ್ ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಹಲವು ಮಹಿಳೆಯರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಬಸ್ ನ ಸೀಟಿಗೆ ಯುವತಿಯ ಕಾಲು ಸಿಲುಕಿ ನರಳಾಡಿದ್ದು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಬಳಿ ಯುವತಿಯ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಡಿಕ್ಕಿ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

Key words:  accident, two, BMTC, buses, Driver,  critical condition