Sunday, September 27, 2026

BDA Apartments

ಬಿಡದಿ ಟೌನ್ ಶಿಪ್ ಪರ, ವಿರುದ್ದ ಹೋರಾಟ: HDK ಭೇಟಿ, ಪೊಲೀಸ್‍ ಸರ್ಪಗಾವಲು BDA JK_Adv BDA Adv
Home Front Page ಬಿಡದಿ ಟೌನ್ ಶಿಪ್ ಪರ, ವಿರುದ್ದ ಹೋರಾಟ: HDK ಭೇಟಿ, ಪೊಲೀಸ್‍ ಸರ್ಪಗಾವಲು

ಬಿಡದಿ ಟೌನ್ ಶಿಪ್ ಪರ, ವಿರುದ್ದ ಹೋರಾಟ: HDK ಭೇಟಿ, ಪೊಲೀಸ್‍ ಸರ್ಪಗಾವಲು

ರಾಮನಗರ,ಜೂನ್,27,2026 (www.justkannada.in): ಬಿಡದಿಯ ಟೌನ್ ಶಿಪ್ ವಿರೋಧಿಸಿ ಒಂದೆಡೆ  ರೈತರ ಪ್ರತಿಭಟನೆಯಾದರೇ ಮತ್ತೊಂದಡೆ ಟೌನ್ ಶಿಪ್ ಬೆಂಬಲಿಸಿ ರೈತ ಮುಖಡರ ಪ್ರತಿಭಟನೆ ತಾರಕಕ್ಕೇರಿದೆ.

ಇಂದು ಬೈರಮಂಗಲಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.  ಟೌನ್ ಶಿಪ್ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದು ಈ ವೇಳೆ ಟೌನ್ ಶಿಪ್ ಬೆಂಬಲಿಸುವ ರೈತಮುಖಂಡರು ಹೆಚ್ ಡಿ ಕುಮಾರಸ್ವಾಮಿ ಕಾರಿಗೆ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಸ್ ಪಿ ಶ್ರೀನಿವಾಸಗಗೌಡ ನೇತೃತವದಲ್ಲಿ ಭದ್ರತೆ  ನೀಡಲಾಗಿದೆ.ಬಿಡದಿ ಟೌನ್ ಶಿಪ್ ಪರ bidadi

ಟೌನ್ ಶಿಪ್ ಗೆ ಭೂಸ್ವಾಧೀನ ವಿರೋಧಿಸಿ 400 ದಿನಗಳಿಂದಲೂ ರೈತರು  ಪ್ರತಿಭಟನೆ  ನಡೆಸುತ್ತಿದ್ದಾರೆ. ಇತ್ತ ಅಭಿವೃದ್ದಿಗಾಗಿ ಟೌನ್ ಶಿಪ್ ಬೇಕು ಭೂಮಿಕೊಡಲು ಸಿದ್ದ ಎಂದು ರೈತ ಮುಖಂಡರೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಸಮ್ಮುಖದಲ್ಲಿ ಸಿಎಂ ಡಿಕೆ ಶಿವಕುಮಾರ್ ಗೆ ಬಹಿರಂಗ ಚರ್ಚೆಗೆ ಬರುವಂತೆ ಪಂಥ್ವಾಹ್ವಾನ ನೀಡಿದ್ದಾರೆ.ವಿರುದ್ದ ಹೋರಾಟ jk02_new jk02 new

Key words: Protest, against, Bidadi Township, Police security