ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಭೇಟಿಯಾದ KSOU  ನೂತನ ವಿಸಿ ಪ್ರೊ, ಎ.ಪಿ. ಜ್ಞಾನಪ್ರಕಾಶ್‌

Newly appointed KSOU Vice-Chancellor Prof. A.P. Gnana Prakash met former Vice-Chancellor Prof. K.S. Rangappa at his Mysuru residence and sought his blessings. Prof. Rangappa congratulated and felicitated the new VC, wishing him a successful tenure. Currently serving as Senior Professor and Head of the Department of Physics at the University of Mysore, Prof. Gnana Prakash is an internationally acclaimed researcher with over 155 research publications, 175 conference presentations, and 11 Ph.D. scholars guided. He is also a recipient of the Sir C.V. Raman Young Scientist State Award from the Government of Karnataka.

 

ಮೈಸೂರು, ಜೂ.೨೬,೨೦೨೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊಫೆಸರ್ ಎ.ಪಿ. ಜ್ಞಾನ ಪ್ರಕಾಶ್ ಅವರು ಇಂದು ನಿವೃತ್ತ ಕುಲಪತಿ ಪ್ರೊಫೆಸರ್ ಕೆ.ಎಸ್. ರಂಗಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮೈಸೂರಿನ ನಿವಾಸದಲ್ಲಿ ನಡೆದ ಈ ಆತ್ಮೀಯ ಭೇಟಿಯಲ್ಲಿ, ಪ್ರೊ. ರಂಗಪ್ಪ ಹಾಗೂ ಮಡದಿ ಪೂರ್ಣಿಮಾ ದೇವಿ ಅವರು ನೂತನ ಕುಲಪತಿಯನ್ನು ಸನ್ಮಾನಿಸಿ, ಅವರ ಆಡಳಿತಾವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದು, ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಎಂ.ಎಸ್‌ಸಿ. ಮತ್ತು ಎಂ.ಫಿಲ್. ಪದವಿ ಪಡೆದಿರುವ ಅವರು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಗಳಿಸಿದ್ದಾರೆ.

ಅಲ್ಲದೆ ಅಮೆರಿಕದ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ತೈವಾನ್‌ನ ನ್ಯಾಷನಲ್ ಡಾಂಗ್ ಹ್ವಾ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್-ಡಾಕ್ಟರಲ್ ಸಂಶೋಧಕರಾಗಿ ಕಾರ್ಯನಿರ್ವಹಿಸಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಅನುಭವವನ್ನು ಸಂಪಾದಿಸಿದ್ದಾರೆ.

2007ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆಯಾದ ಅವರು, ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಹಿರಿಯ ಪ್ರಾಧ್ಯಾಪಕರಾಗಿ ಬೆಳೆದಿದ್ದಾರೆ. ಪರೀಕ್ಷಾಂಗ ಕುಲಸಚಿವರಾಗಿ , ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಹಾಗೂ ಔಟ್ರೀಚ್ ಕಾರ್ಯಕ್ರಮಗಳ ನಿರ್ದೇಶಕರಂತಹ ಪ್ರಮುಖ ಆಡಳಿತಾತ್ಮಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಂಶೋಧನಾ ಕ್ಷೇತ್ರದಲ್ಲಿಯೂ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. 155ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಅವರು, 175ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. 11 ಮಂದಿ ಪಿಎಚ್.ಡಿ. ಸಂಶೋಧಕರಿಗೆ ಮಾರ್ಗದರ್ಶನ ನೀಡಿರುವ ಹೆಗ್ಗಳಿಕೆಯೂ ಅವರದು.

ಅರೆವಾಹಕ ಸಾಧನಗಳು, ವಿಕಿರಣ ಭೌತಶಾಸ್ತ್ರ ಮತ್ತು ನ್ಯಾನೋಮಟೀರಿಯಲ್ಸ್ ಕ್ಷೇತ್ರದಲ್ಲಿ ಅವರ ಸಂಶೋಧನೆ ವಿಶೇಷ ಮನ್ನಣೆ ಗಳಿಸಿದೆ. ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಸರ್ ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ’ ಕೂಡ ಅವರಿಗೆ ಲಭಿಸಿದೆ.

ಈಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಅವರಿಂದ ವಿಶ್ವವಿದ್ಯಾನಿಲಯಕ್ಕೆ ಹೊಸ ದಿಕ್ಕು, ಹೊಸ ಚೈತನ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಚಂದ್ರಶೇಖರ್‌, ಪ್ರೊ.ಶ್ರೀಕಂಠಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

KEY WORDS: KSOU, Vice-Chancellor Prof. A.P. Gnana Prakash, former Vice-Chancellor Prof. K.S. Rangappa

SUMMARY: 

New KSOU VC Meets Former Vice-Chancellor

Newly appointed KSOU Vice-Chancellor Prof. A.P. Gnana Prakash met former Vice-Chancellor Prof. K.S. Rangappa at his Mysuru residence and sought his blessings. Prof. Rangappa congratulated and felicitated the new VC, wishing him a successful tenure.

Currently serving as Senior Professor and Head of the Department of Physics at the University of Mysore, Prof. Gnana Prakash is an internationally acclaimed researcher with over 155 research publications, 175 conference presentations, and 11 Ph.D. scholars guided. He is also a recipient of the Sir C.V. Raman Young Scientist State Award from the Government of Karnataka.

#KSOU #ViceChancellor #APGnanaPrakash #Mysuru #HigherEducation #JustKannada