ನೀವು ದೆಹಲಿಗೆ ಹೋಗ್ಬೇಡಿ, ಹೋದ್ರೆ ರಾಜೀನಾಮೆ ಪಡೆಯುತ್ತಾರೆ- ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು,ಜೂನ್,20,2026 (www.justkannada.in):  ರಾಜ್ಯದಲ್ಲಿ 7 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ –ಜೆಡಿಎಸ್ ನಲ್ಲಿ ಅಡ್ಡಮತದಾನ ಮಾಡಿದ್ದು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ  ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರನ್ನ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ದೆಹಲಿಗೆ ರಾಜ್ಯ ಬಿಜೆಪಿ ನಾಯಕರು ಹೋಗಬೇಡಿ. ಬಿವೈ ವಿಜಯೇಂದ್ರ, ಆರ್.ಅಶೋಕ್ ದೆಹಲಿಗೆ ಹೋಗಬೇಡಿ. ನೀವು ದೆಹಲಿಗೆ ಹೋದರೆ ನಿಮ್ಮ ರಾಜೀನಾಮೆ ಪಡೆಯುತ್ತಾರೆ  ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

Key words: Delhi, BJP, Leaders,resignation, Minister, Priyank Kharge