Sunday, September 20, 2026

BDA Apartments

Home Crime ಮೈಸೂರು ಅಧಿಕಾರಿಗಳ ಜಂಟಿ ಕಾರ್ಯಾಚರಣೆ: ಹೋಟೆಲ್ ಗಳಿಗೆ ಬೀಗ, 13 ರೆಸ್ಟೋರೆಂಟ್ ಗಳ ವಿರುದ್ಧ ಕೇಸ್

ಮೈಸೂರು ಅಧಿಕಾರಿಗಳ ಜಂಟಿ ಕಾರ್ಯಾಚರಣೆ: ಹೋಟೆಲ್ ಗಳಿಗೆ ಬೀಗ, 13 ರೆಸ್ಟೋರೆಂಟ್ ಗಳ ವಿರುದ್ಧ ಕೇಸ್

ಮೈಸೂರು,ಜೂನ್,20,2026 (www.justkannada.in):  ದಟ್ಟಗಳ್ಳಿಯ ಪಬ್ ನಲ್ಲಿ ಅಗ್ನಿ ಅವಘಡ ಘಟನೆ ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಮೈಸೂರು ಅಧಿಕಾರಿಗಳು ಇದೀಗ ನಗರದ ರೆಸ್ಟೋರೆಂಟ್, ಡಾಬಾ, ಮಿಲಿಟಿರಿ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ನಗರಪಾಲಿಕೆ, ಅಬಕಾರಿ ಇಲಾಖೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ಟ್ರೇಡ್ ಲೈಸನ್ಸ್ ಪಡೆಯದ 9 ಹೋಟೆಲ್ ಗಳನ್ನ ಬಂದ್ ಮಾಡಿದ್ದಾರೆ. ಹಾಗೆಯೇ 13 ರೆಸ್ಟೋರೆಂಟ್ ಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಮೈಸೂರು ಅಧಿಕಾರಿಗಳ ಜಂಟಿ ಕಾರ್ಯಾಚರಣೆ fire

ಈ ನಡುವೆ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ 7 ಮಂದಿ ವಿರುದ್ಧ ಮೈಸೂರು ಪೊಲೀಸರು ಹಾಗು ಅಬಕಾರಿ ಇಲಾಖೆ ಅಧಿಕಾರಿಗಳು ಕೇಸ್ ಜಡಿದಿದ್ದಾರೆ.

ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿರುವ ಫಾಕ್ಸ್ ಡೆಕ್ ಲಿಕ್ಕರ್‌ ಎಂಬ ಪಬ್​ ನಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವದಹನವಾಗಿದ್ದರು 7 ಮಂದಿ ಗಂಭೀರ ಗಾಯಗೊಂಡಿದ್ದರು.ಹೋಟೆಲ್ ಗಳಿಗೆ ಬೀಗ jk02_new jk02 new

Key words: Joint operation, Mysore officials,  Hotels, Bandh, cases, filed