Friday, September 18, 2026

BDA Apartments

EXCLUSIVE: ಚಾಮುಂಡಿ ಬೆಟ್ಟಕ್ಕೆ ಹೊಸ SOP: ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬ್ರೇಕ್ BDA JK_Adv BDA Adv
Home Front Page EXCLUSIVE: ಚಾಮುಂಡಿ ಬೆಟ್ಟಕ್ಕೆ ಹೊಸ SOP: ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬ್ರೇಕ್

EXCLUSIVE: ಚಾಮುಂಡಿ ಬೆಟ್ಟಕ್ಕೆ ಹೊಸ SOP: ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬ್ರೇಕ್

Mysuru: Authorities have launched a major cleanliness initiative at Chamundi Hill, the abode of Goddess Chamundeshwari, following directions from Regional Commissioner Nitesh Patil. From today, cleaning operations will be carried out three times a day across the hill, including the temple premises, steps used by devotees, and the road leading to the hill. Speaking to “Just Kannada” Nitesh Patil said thousands of devotees visit Chamundi Hill every day, making cleanliness and proper maintenance a top priority. Coordination issues between the Temple, Forest Department, and Chamundi Hill Development Authority have now been resolved to ensure better management.

 

ಮೈಸೂರು, ಜೂ.೧೭,೨೦೨೬ : ನಾಡಿನ ಅಧಿದೇವತೆ, ಮೈಸೂರಿನ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟವನ್ನು ಮತ್ತಷ್ಟು ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿಯಾಗಿ ರೂಪಿಸಲು ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಪ್ರಾದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್ ಅವರ ಸೂಚನೆ ಮೇರೆಗೆ ಇಂದಿನಿಂದ ಬೆಟ್ಟದಲ್ಲಿ ನಿತ್ಯ ಮೂರು ಬಾರಿ ಸ್ವಚ್ಛತಾ ಕಾರ್ಯ ನಡೆಸಲು ಚಾಲನೆ ನೀಡಲಾಗಿದೆ.

ದೇವಾಲಯದ ಆವರಣ ಮಾತ್ರವಲ್ಲದೆ, ಭಕ್ತರು ಬಳಸುವ ಮೆಟ್ಟಿಲುಗಳ ಮಾರ್ಗ, ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪ್ರವಾಸಿಗರು ಹೆಚ್ಚಾಗಿ ಸಂಚರಿಸುವ ಪ್ರದೇಶಗಳು ಸೇರಿದಂತೆ ಸಂಪೂರ್ಣ ಬೆಟ್ಟದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಚಾಮುಂಡಿ ಬೆಟ್ಟವನ್ನು ಮಾದರಿ ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

” ಜಸ್ಟ್ ಕನ್ನಡ”  ಜತೆ ಮಾತನಾಡಿದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ , “ಚಾಮುಂಡಿ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ದೇವಾಲಯದ ಸುತ್ತಮುತ್ತ ಹಾಗೂ ಬೆಟ್ಟದ ಸಂಪೂರ್ಣ ಪ್ರದೇಶ ಸ್ವಚ್ಛವಾಗಿರುವುದು ಅತ್ಯಗತ್ಯ. ಆದರೆ ಇದುವರೆಗೆ ದೇವಾಲಯ, ಅರಣ್ಯ ಇಲಾಖೆ ಹಾಗೂ ಪ್ರಾಧಿಕಾರದ ವ್ಯಾಪ್ತಿಗಳ ನಡುವೆ ನಿರ್ವಹಣೆ ಕುರಿತಾಗಿ ಕೆಲವು ಗೊಂದಲಗಳಿದ್ದವು. ಯಾವ ಇಲಾಖೆ ಯಾವ ಪ್ರದೇಶದ ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ ಚರ್ಚಿಸಿ ಈಗ ಸ್ಪಷ್ಟತೆ ತರಲಾಗಿದೆ. ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಚಾಮುಂಡಿ ಬೆಟ್ಟ ಕೇವಲ ಮೈಸೂರಿನ ಹೆಮ್ಮೆ ಮಾತ್ರವಲ್ಲ, ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರ ಮೇಲೆ ಉತ್ತಮ ಅಭಿಪ್ರಾಯ ಮೂಡಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು. “ಚಾಮುಂಡಿ ಬೆಟ್ಟದ ಸ್ವಚ್ಛತೆ ಮತ್ತು ವ್ಯವಸ್ಥಿತ ನಿರ್ವಹಣೆ ಮೈಸೂರಿನ ಹಾಗೂ ಕರ್ನಾಟಕದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ” ಎಂದರು.

EXCLUSIVE jk02

ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟಕ್ಕೆ ಸಿದ್ಧತೆ :

ಚಾಮುಂಡಿ ಬೆಟ್ಟದಲ್ಲಿ ಕಟ್ಟುನಿಟ್ಟಿನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಅದರ ಭಾಗವಾಗಿ ಸಂಪೂರ್ಣ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಚಾಮುಂಡಿ ಬೆಟ್ಟಕ್ಕೆ ಹೊಸ SOP TEMPLE

ಇದರ ಅನ್ವಯ:

ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಕುಡಿಯುವ ನೀರಿನ ಮಾರಾಟಕ್ಕೆ ನಿರ್ಬಂಧ.

RO ಘಟಕಗಳ ಮೂಲಕ ಉಚಿತ ಕುಡಿಯುವ ನೀರಿನ ವ್ಯವಸ್ಥೆ.

ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ.

ಕಸ ವಿಲೇವಾರಿ ಹಾಗೂ ಪರಿಸರ ಸಂರಕ್ಷಣೆಗೆ ವಿಶೇಷ ಕ್ರಮ.

ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು.

ಭಕ್ತರು ಮತ್ತು ಪ್ರವಾಸಿಗರ ಸಹಕಾರಕ್ಕೂ ಕರೆ

ಸ್ವಚ್ಛ ಚಾಮುಂಡಿ ಬೆಟ್ಟ ನಿರ್ಮಾಣ ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಭಕ್ತರು ಹಾಗೂ ಪ್ರವಾಸಿಗರ ಸಹಕಾರವೂ ಅಗತ್ಯವಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವಂತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗುವಂತೆ ಪ್ರಾಧಿಕಾರ ಮನವಿ ಮಾಡಿದೆ.

ಚಾಮುಂಡಿ ಬೆಟ್ಟವನ್ನು ರಾಜ್ಯದ ಅತ್ಯಂತ ಸ್ವಚ್ಛ ಮತ್ತು ಪರಿಸರ ಸ್ನೇಹಿ ಧಾರ್ಮಿಕ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮಗಳು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Key words: Chamundi Hill, Mysuru, Chamundeshwari Temple, Plastic Free Chamundi Hill, Clean Mysuru, Karnataka Tourism, Nitesh Patil, Just Kannada

ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬ್ರೇಕ್ jk02

SUMMARY: 

Chamundi Hill to Get Major Cleanliness Drive, Plastic Ban on Cards

Mysuru: Authorities have launched a major cleanliness initiative at Chamundi Hill, the abode of Goddess Chamundeshwari, following directions from Regional Commissioner Nitesh Patil.

From today, cleaning operations will be carried out three times a day across the hill, including the temple premises, steps used by devotees, and the road leading to the hill.

Speaking to “Just Kannada” Nitesh Patil said thousands of devotees visit Chamundi Hill every day, making cleanliness and proper maintenance a top priority. Coordination issues between the Temple, Forest Department, and Chamundi Hill Development Authority have now been resolved to ensure better management.

EXCLUSIVE: ಚಾಮುಂಡಿ ಬೆಟ್ಟಕ್ಕೆ ಹೊಸ SOP: ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬ್ರೇಕ್ PATIL

The administration is also preparing a Standard Operating Procedure (SOP) to make Chamundi Hill a plastic-free zone. The proposed measures include:

Ban on the sale of drinking water in plastic bottles.

Free drinking water through RO plants.

Prohibition of plastic use and sale in shops on the hill.

Strengthened waste management and cleanliness measures.

Patel said Chamundi Hill is not only Mysuru’s pride but also a symbol of Karnataka,and maintaining its cleanliness will enhance the state’s image among devotees and tourists.

chamundi hill jk02_new jk02 new

#ChamundiHill #Mysuru #ChamundeshwariTemple #PlasticFreeChamundiHill #CleanMysuru #KarnatakaTourism #NiteshPatil #JustKannada

nitesh patil mahesh Editor Pic
Editor Pic