ಬೆಂಗಳೂರು,ಜೂನ್,11,2026 (www.justkannada.in): ಹಿಂದುಳಿದ ವರ್ಗ ಇಲಾಖೆಯಲ್ಲಿ ಅನುದಾನ ಹಂಚಿಕೆ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೆಲವು ಸ್ವಾಮೀಜಿಗಳು ಜನರು ಈಗ ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ರಾಜೀನಾಮೆ ಬಳಿಕ ಸಿದ್ದರಾಮಯ್ಯ ಅದೇಶಕ್ಕೆ ಸಹಿ ಹಾಕಬಾರದಿತ್ತು ಈ ಕ್ರಮ ಅಸಂವಿಧಾನಿಕ. ಈಗಿನ ಸಿಎಂ ಡಿಕೆ ಶಿವಕುಮಾರ್ ಗೆ ಹೇಳಿ ಆದೇಶ ಮಾಡಿಸಬಹುದಿತ್ತು. ಆಗ ಸಿದ್ದರಾಮಯ್ಯ ಉಸ್ತುವಾರಿ ಮುಖ್ಯಮಂತ್ರಿ ಅಷ್ಟೆ ಆಗಿದ್ದರು ತಕ್ಷಣ ಈ ಅನುದಾನವನ್ನು ಡಿಕೆ ಶಿವಕುಮಾರ್ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳೆಗಿಳಿಯವಾಗ ಹಿಂದುಳಿದ ವರ್ಗಗಳ ವರದಿ ಸ್ವೀಕಾರ ಮಾಡಿದರು. ಅನುಭವವಿದ್ದ ಸಿಎಂ ಈ ರೀತಿ ಸಣ್ಣತನದಿಂದ ಏಕೆ ನಡೆದುಕೊಂಡರು. ರಾಕೇಶ್ ಹೆಸರಿನಲ್ಲಿರುವ ಸಂಸ್ಥೆಗೆ ಯಾಕೆ ಅನುದಾನ ಕೊಡಬೇಕಿತ್ತು ಇದೆಲ್ಲವನ್ನೂ ಡಿಕೆ ಶಿವಕುಮಾರ್ ಸರಿಮಾಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
Key words: allocation, grants, Siddaramaiah, Chalavadi Narayanaswamy






