Wednesday, September 9, 2026

BDA Apartments

Home Front Page ಜಿ.ಟಿ ದೇವೇಗೌಡರು JDS ಪಕ್ಷ ಬಿಡಲ್ಲ- ಶಾಸಕ ಹೆಚ್.ಡಿ ರೇವಣ್ಣ

ಜಿ.ಟಿ ದೇವೇಗೌಡರು JDS ಪಕ್ಷ ಬಿಡಲ್ಲ- ಶಾಸಕ ಹೆಚ್.ಡಿ ರೇವಣ್ಣ

ಮೈಸೂರು,ಜೂನ್,11,2026 (www.justkannada.in): ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಜೆಡಿಎಸ್ ಪಕ್ಷ ತೊರೆಯುತ್ತಾರೆಯೇ ಅಥವಾ ಪಕ್ಷದಲ್ಲೇ ಉಳಿಯುತ್ತಾರೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ  ಶಾಸಕ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಜಿ.ಟಿ ದೇವೇಗೌಡರು ಜೆಡಿಎಸ್ ಬಿಡಲ್ಲ. ಜೆಡಿಎಸ್ ನಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ ನಾನು ಹೆಚ್ ಡಿ ಕುಮಾರಸ್ವಾಮಿ ಸೇರಿ ಎಲ್ಲರೂ ಒಟ್ಟಾಗಿ ಕೂತು ಮಾತನಾಡುತ್ತೇವೆ ಎಂದರು.

ಜಿಟಿ ದೇವೇಗೌಡರು ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ.  ಖುದ್ದು ಮಾಜಿ ಪ್ರಧಾನಿ ಹೆಚ್ ಡಿ  ದೇವೇಗೌಡರು ಜಿಟಿಡಿ ಭೇಟಿ ಮಾಡಿ ಈ ಬಗ್ಗೆ ಹೇಳಿದ್ದಾರೆ  ಎಂದು ಶಾಸಕ ಹೆಚ್ ಡಿ ರೇವಣ್ಣ ಸ್ಪಷ್ಟಪಡಿಸಿದರು.

Key words: GT Deve Gowda, not, left, JDS party, MLA, HD Revanna