13 ಸಚಿವರಿಗೆ ಕೊಠಡಿಗಳ ಹಂಚಿಕೆ: ರಾಮಲಿಂಗಾರೆಡ್ಡಿ ಅವರಿಗೆ ಬಂಪರ್

ಬೆಂಗಳೂರು, ಜೂನ್,8,2026 (www.justkannada.in): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ನೂತನ 13 ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು ಸಚಿವ ರಾಮಲಿಂಗರೆಡ್ಡಿ ಅವರಿಗೆ ನಾಲ್ಕುಕೊಠಡಿಗಳನ್ನ ನೀಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂದು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿರುವ ಕುರಿತು ಆದೇಶ ಹೊರಡಿಸಿದೆ. ಈ ಪೈಕಿ  ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. 335, 336, 337, 337A ಕೊಠಡಿಗಳನ್ನು ರಾಮಲಿಂಗರೆಡ್ಡಿ ಅವರಿಗೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ರಾಮಲಿಂಗರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ‌.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ರಾಮಲಿಂಗಾರೆಡ್ಡಿಗೆ ನೀಡಿದ್ದಾರೆ. ಆ ಕಚೇರಿಯನ್ನ ಡಿಕೆ ಶಿವಕುಮಾರ್ ಅವರು ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದರು.

ಸಚಿವರಿಗೆ ಹಂಚಿಕೆಯಾದ ಕೊಠಡಿಗಳ ವಿವರ ಹೀಗಿದೆ…

ಪರಮೇಶ್ವರ್ ಉಪ ಮುಖ್ಯಮಂತ್ರಿ (ಕಂದಾಯ ಮತ್ತು ಯುವಸಬಲೀಕರಣ) – ವಿಧಾನಸೌಧ 327/327a

ಕೆ.ಎಚ್ ಮುನಿಯಪ್ಪ, (ಆಹಾರ ಸಚಿವ)- ವಿಧಾನಸೌಧ – 340a/341/341a

ಯತೀಂದ್ರ ಸಿದ್ದರಾಮಯ್ಯ, (ನಗರಾಭಿವೃದ್ಧಿ ಸಚಿವ) – ವಿಧಾನಸೌಧ, 314/314a

ಕೆಜೆ ಜಾರ್ಜ್ (ಇಂಧನ ಮತ್ತು ಪ್ರವಾಸೋದ್ಯುಮ) – ವಿಧಾನಸೌಧ, 317/317a

ಎಂಬಿ ಪಾಟೀಲ್,  (ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ) – ವಿಧಾನಸೌಧ – 344/344a

ರಾಮಲಿಂಗಾರೆಡ್ಡಿ, (ಜಲಸಂಪನ್ಮೂಲ ಸಚಿವ) – ವಿಧಾನಸೌಧ, 335/336/337/337a

ಕೃಷ್ಣ ಬೈರೇಗೌಡ, ಸಚಿವ -(ಬೆಂಗಳೂರು ನಗರಾಭಿವೃದ್ಧಿ ಸಚಿವ)  ವಿಕಾಸಸೌಧ, 244/245

ಪ್ರಿಯಾಂಕ್ ಖರ್ಗೆ, (ಗೃಹ ಇಲಾಖೆ ಮತ್ತು ಐಟಿಬಿಟಿ) – ವಿಕಾಸ ಸೌಧ, 242, 243

ಯುಟಿ ಖಾದರ್,  (ಆರೋಗ್ಯ ಸಚಿವ) – ವಿಧಾನಸೌಧ, 315/315a

ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316a

ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445

ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37

ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345

Key words: Allotment, rooms, 13 ministers, Vidhana Soudha