Thursday, September 17, 2026

BDA Apartments

Home Front Page ಅಂತರಾಷ್ಟ್ರೀಯ ಪ್ಯಾರಾ ಪಂದ್ಯಾವಳಿಗೆ ಮೈಸೂರಿನ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್ ಜೈನ್

ಅಂತರಾಷ್ಟ್ರೀಯ ಪ್ಯಾರಾ ಪಂದ್ಯಾವಳಿಗೆ ಮೈಸೂರಿನ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್ ಜೈನ್

ಮೈಸೂರು,ಜೂನ್,8,2026 (www.justkannada.in): ಮೈಸೂರಿನ ಸಿದ್ಧಾರ್ಥನಗರ ವಿಶೇಷಚೇತನರಾದ ಅಲೋಕ್ ಆರ್.ಜೈನ್ ಈಗ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.

ನೆದರ್ ಲ್ಯಾಂಡ್ಸ್ ನ ನಾರ್ವೆಯಲ್ಲಿ ಪೂಲ್ ಅಸೋಸಿಯೇಷನ್ ನ 3ನೇ ಅಂತಾರಾಷ್ಟ್ರೀಯ ಪ್ಯಾರಾ ವಿಶೇಷಚೇತನರ ಹೇ ಬಾಲ್ ಪಂದ್ಯಾವಳಿಯಲ್ಲಿ ದೇಶದ ಮೂವರು ವಿಶೇಷಚೇತನ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದು, ಈ ಪೈಕಿ ಮೈಸೂರಿನ ಅಲೋಕ್ ಸಹ ಸ್ಥಾನ ಪಡೆದಿದ್ದಾರೆ.

ಇವರ ಸಾಧನೆಗೆ ಕೆಎಂ ಪಿಕೆ ಟ್ರಸ್ಟ್ ಸಹ ಸನ್ಮಾನಿಸಿ ಪ್ರಶಸ್ತಿ ಪಡೆದು ಬರುವಂತೆ ಶುಭ ಹಾರೈಸಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಆಲೋಕ್ ಆರ್.ಜೈನ್ ಮಾತನಾಡಿ, ವಿಕಲಚೇತನ ಎನ್ನುವುದು ಶಾಪವಲ್ಲ, ಅದು ನಮ್ಮಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಒಂದು ಉತ್ತಮ ಅವಕಾಶ ಎಂದು ಆತ್ಮವಿಶ್ವಾಸವಿಡಬೇಕು. ಗುರಿ ತಲುಪಲು ಆಸೆ ಇದ್ದರೆ ಸಾಲದು. ಆಸಕ್ತಿ, ನಿರಂತರ ಅಭ್ಯಾಸ, ಏಕಾಗ್ರತೆ ಮುಖ್ಯವಾಗಲಿದೆ ಎಂದರು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಬೇರೆ ದೇಶಗಳಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಸಹಕಾರವಿದೆ. ಇಂತಹ ವಿಶೇಷಚೇತನರೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರುತ್ತಿದ್ದಾರೆ. ಅಂತಹವರಿಗೆ ಸರ್ಕಾರ ಬೆಂಬಲವಾಗಿ ನಿಂತರೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ಸಿಕ್ಕಂತೆ ಆಗಲಿದೆ ಎಂದರು.

ನಿರೂಪಕ ಅಜಯ್ ಶಾಸ್ತ್ರಿ, ಸಂದೇಶ್,ಅಮಿತ್ ,ಚೇತನ್ ,ಸುಹಾಸ್, ರಿತೇಶ್, ಯಶವಂತ್ ,ವಿಶಾಲ್ ,ಅರ್ಜುನ್, ನಿಶಾಂತ್ ಇನ್ನಿತರರು ಉಪಸ್ಥಿತರಿದ್ದರು.mysore jk02_new jk02 new

Key words: Mysore, athlete, Alok R Jain, international, para tournament