ಬೆಂಗಳೂರು,ಜೂನ್,5,2026 (www.justkannada.in): ಬೆಂಗಳೂರು ನಗರಾಭಿವೃದ್ದಿ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗರೆಡ್ಡಿ ಅವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಚಿವ ಸ್ಥಾನಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ರಾಮಲಿಂಗರೆಡ್ಡಿ ನನ್ನ ಆತ್ಮಿಯರು. ಅವರು ನನ್ನ ಸಹದ್ಯೋಗಿಗಳು. ಅವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ರಾಮಲಿಂಗರೆಡ್ಡಿ ಕರೆದು ಮಾತನಾಡುತ್ತೇನೆ ಎಂದರು.
ಅವರಿಗೆ ಪಾಪ ಹಳ್ಳಿಯಲ್ಲಿ ಹೋಗಿ ಕೆಲಸ ಮಾಡಲು ಆಗಲ್ಲ. ಬೇರೆ ಯಾವುದಾದರೂ ಖಾತೆ ಕೊಡಿ ಎಂಬ ಅಭಿಲಾಷೆ ಇದೆ. ಈ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.
Key words: discuss, with, Ramalinga Reddy, CM, DK Shivakumar







