Saturday, September 5, 2026

BDA Apartments

Home Front Page ರಾಜೀನಾಮೆ ನೀಡಿದ್ರೂ ಶಾಸಕನಾಗಿ ಕಾಂಗ್ರೆಸ್ ನಲ್ಲೇ ಇರ್ತೇನೆ-ರಾಮಲಿಂಗರೆಡ್ಡಿ

ರಾಜೀನಾಮೆ ನೀಡಿದ್ರೂ ಶಾಸಕನಾಗಿ ಕಾಂಗ್ರೆಸ್ ನಲ್ಲೇ ಇರ್ತೇನೆ-ರಾಮಲಿಂಗರೆಡ್ಡಿ

ಬೆಂಗಳೂರು,ಜೂನ್ 5,2026 (www.justkannada.in): ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಕಾಂಗ್ರೆಸ್ ಶಾಸಕ ನಾಗಿಯೇ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ದಿ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗರೆಡ್ಡಿ ಈ ಕುರಿತು ಮಾತನಾಡಿ, ಡಿಕೆ  ಶಿವಕುಮಾರ್ ಸಿದ್ದರಾಮಯ್ಯ ಮೇಲೆ ನನಗೆ ಕೋಪವಿಲ್ಲ. ಈ ಹಿಂದೆ ಬೆಂಗಳೂರು ಖಾತೆ ಕೊಡುತ್ತೇನೆ ಎಂದಿದ್ದರು.  ಸಿದ್ದರಾಮಯ್ಯ ಸರ್ಕಾರದಲ್ಲಿ ಭರವಸ ಕೊಟ್ಟಿದ್ದರು.  ಡಿಕೆ ಶಿವಕುಮಾರ್ ಡಿಕೆ ಸುರೇಶ್ ಮನೆಗೆ ಬಂದು ಖಾತೆ ಬಗ್ಗೆ ಹೇಳಿದ್ದರು.  2 ಬಾರಿ ಅವರೇ ಕರೆದು ಪ್ರಾಮಿಸ್ ಮಾಡಿದ್ದರು ಆದರೆ ಕೊಡಲಿಲ್ಲ ಎಂದು ಬೇಸರ ಹೊರಹಾಕಿದರು.

ಶಿವಕುಮಾರ್ ಬಳಿ ಹೋಗಿ ಮಂತ್ರಿಗಿರಿ ಕೇಳಿರಲಿಲ್ಲ.  ಸಿದ್ದರಾಮಯ್ಯ ಬಳಿ ಹೋಗಿ ಮಂತ್ರಿಗಿರಿ ಕೇಳಿರಲಿಲ್ಲ  ಹೈಕಮಾಂಡ್ ಗೂ ಕೇಳಿರಲಿಲ್ಲ. ನನನ್ನು ಮಂತ್ರಿ ಮಾಡಿದರು. ಬೆಂಗಳೂರು ನಗರಾಭಿವೃದ್ದಿ ಖಾತೆ ಕೊಡುತ್ತೇನೆ ಅಂದರು. ಈಗ ನೋಡಿದರೇ ಜಲ ಸಂಪನ್ಮೂಲ ಖಾತೆ ನೀಡಿದ್ದಾರೆ.  ಎರಡು ಬಾರಿಯೂ ಕೂಡ ಬೇರೆಯವರಿಗೆ ಕೊಟ್ಟರು ಅದಕ್ಕೆ ನನಗೆ ಬೇಸರ ಆಗಿ ರಾಜೀನಾಮೆ ನೀಡಿದ್ದೇನೆ ಆತ್ಮಸಾಕ್ಷಿ ವಿರುದ್ದ ಕೆಲಸ ಮಾಡಲು ಆಗುತ್ತಿಲ್ಲ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: resign, remain, Congress, MLA, Ramalinga Reddy